ಹೈದರಾಬಾದ್ ಬದಲಿಸಲು ನಮಗೊಂದು ಅವಕಾಶ ಕೊಡಿ ಎಂದ ಅಮಿತ್ ಶಾ

Update: 2020-11-29 13:01 GMT

ಹೈದರಾಬಾದ್: ಮುಂದಿನ ವಾರ ನಡೆಯಲಿರುವ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆ ಪ್ರಚಾರದಲ್ಲಿ ರವಿವಾರ ಭಾಗವಹಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಳೆದ ತಿಂಗಳು ನಗರವನ್ನು ಅಸ್ತವ್ಯಸ್ತಗೊಳಿಸಿದ  ಪ್ರವಾಹವನ್ನು ನೆನಪಿಸಿದರು. ಬಿಜೆಪಿ ನಗರವನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ತೋರಿಸಲು ಮತದಾರರು ನಮಗೊಂದು ಅವಕಾಶ ಕೊಡಬೇಕೆಂದು ಕೇಳಿಕೊಂಡರು ನಾವು ನಗರವನ್ನು ಉತ್ತಮಸ್ಥಿತಿಗೆ ಕೊಂಡೊಯ್ಯತ್ತೇವೆ. ರಾಜವಂಶದಿಂದ ಪ್ರಜಾಪ್ರಭುತ್ವದ ಕಡೆಗೆ ಹಾಗೂ ಭ್ರಷ್ಟಚಾರದಿಂದ ಪಾರದರ್ಶಕತೆ ಕಡೆಗೆ ಹೈದರಾಬಾದ್ ನಗರವನ್ನು ಬದಲಾಯಿಸುತ್ತೇವೆ ಎಂದು ಭರವಸೆ ನೀಡಿದರು.

ಚುನಾವಣೆ ಪ್ರಚಾರದ ಅಂತಿಮ ದಿನದಂದು ಸಾರ್ವಜನಿಕ ರ್ಯಾಲಿಯನ್ನು ದ್ದೇಶಿಸಿ ಮಾತನಾಡಿದ ಶಾ, ಬಿಜೆಪಿಯು ನವಾಬ್-ನಿಜಾಮ್ ಸಂಸ್ಕೃತಿಯ ಹೈದರಾಬಾದ್ ನಗರವನ್ನು ತೊಡೆದು ಹಾಕಲು ಬಯಸಿದೆ. ಯಾವುದೇ ಸಮುದಾಯವನ್ನು ಓಲೈಸುವುದನ್ನು ನಾವು ಸಹಿಸುವುದಿಲ್ಲ. ಯಾರೂ ಕೂಡ ಎರಡನೇ ದರ್ಜೆಯ ನಾಗರಿಕರಾಗುವುದಿಲ್ಲ ಎಂದು ನಮ್ಮ  ಪಕ್ಷ ಖಚಿತಪಡಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News