ಸ್ಟ್ಯಾನ್ ಸ್ವಾಮಿಗೆ ಸವಲತ್ತು ಒದಗಿಸಿಲ್ಲ ಎಂಬ ಆರೋಪ ಸುಳ್ಳು: ತಲೋಜ ಜೈಲಿನ ಅಧಿಕಾರಿ

Update: 2020-11-29 16:44 GMT

ಹೊಸದಿಲ್ಲಿ, ನ.29: ಎಲ್ಗರ್ ಪರಿಷದ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆದಿವಾಸಿ ಹಕ್ಕುಗಳ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿಗೆ ಜೈಲಿನಲ್ಲಿ ಸಿಪರ್ ಕಪ್ ಮತ್ತು ಸ್ಟ್ರಾ(ಪಾನೀಯ ಕುಡಿಯಲು ಬಳಸುವ ಸಾಧನ)ಗಳನ್ನು ಒದಗಿಸಿಲ್ಲ ಎಂಬ ಆರೋಪ ಆಧಾರರಹಿತವಾಗಿದೆ ಎಂದು ತಲೋಜ ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಪಾರ್ಕಿನ್‌ಸನ್ ರೋಗ ಸಹಿತ ಹಲವು ರೋಗಗಳಿಂದ ಬಳಲುತ್ತಿರುವ ಸ್ವಾಮಿ ಸಿಪರ್‌ಕಪ್ ಮತ್ತು ಸ್ಟ್ರಾಗಳಿಗೆ ಬೇಡಿಕೆ ಸಲ್ಲಿಸಿದ್ದರೂ ಒದಗಿಸಲು ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು ಸ್ವಾಮಿಗೆ ಸಿಪರ್‌ಕಪ್ ಮತ್ತು ಸ್ಟ್ರಾ ರವಾನಿಸುವ ಅಭಿಯಾನಕ್ಕೆ ಕರೆ ನೀಡಿದ್ದರು. ಸಿಪರ್‌ಕಪ್ ಮತ್ತು ಸ್ಟ್ರಾ ಮಾತ್ರವಲ್ಲ, ಅವರಿಗೆ ಗಾಲಿಕುರ್ಚಿ, ವಾಕಿಂಗ್ ಸ್ಟಿಕ್, ವಾಕರ್‌ನಂತಹ ಸೌಕರ್ಯ ಒದಗಿಸಲಾಗಿದೆ. ಅಲ್ಲದೆ ಇಬ್ಬರು ಸಹಾಯಕರನ್ನೂ ನೇಮಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಅವರ ಅನಾರೋಗ್ಯದ ಬಗ್ಗೆ ನಮಗೆ ತಿಳಿದಿದೆ. ಆದ್ದರಿಂದ ಅವರಿಗೆ ಅಗತ್ಯವಿರುವ ಸಾಧನಗಳನ್ನು ಒದಗಿಸಲು ನಾವೇಕೆ ನಿರಾಕರಿಸಬೇಕು ? ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News