ನಾಲೆಜ್ ಪಾರ್ಕ್ ನಿಂದ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಗ್ರಾಜುವೇಶನ್ ಫೌಂಡೇಶನ್ ಪ್ರೋಗ್ರಾಂ

Update: 2020-11-30 17:48 GMT

ಉಡುಪಿ : ಪುಣೆಯ ನಾಲೆಜ್ ಪಾರ್ಕ್ (ಕೆಪಿ) ಚ್ಯಾರಿಟೇಬಲ್ ಟ್ರಸ್ಟ್  ಮತ್ತು ಕರ್ನಾಟಕ ರಾಜ್ಯ ಮಟ್ಟದ ಸಮನ್ವಯಕಾರರಾದ ಇಹ್ಯಾ  ಎಜುಕೇಶನಲ್ ಆ್ಯಂಡ್ ಚ್ಯಾರಿಟೇಬಲ್ ಟ್ರಸ್ಟ್ ಶಿರೂರು ಹಾಗೂ ಇದಿನಬ್ಬ ಫೌಂಡೇಶನ್ ಸಾಗರ ಜಂಟಿಯಾಗಿ ಉಡುಪಿಯ ಮಣಿಪಾಲ್ ಇನ್ ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎಂಟನೇ ತರಗತಿಯಿಂದ 11ನೇ ತರಗತಿಗಳ ಗ್ರಾಜುವೇಶನ್ ಫೌಂಡೇಶನ್ ಪ್ರೋಗ್ರಾಂ ಆರಂಭಿಸಿವೆ.

ಮಂಗಳೂರು ಹಾಗೂ ಉಡುಪಿಯ ವಿವಿಧ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳು, ಎನ್‍ಜಿಒಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಫೌಂಡೇಶನ್ ಪ್ರೋಗ್ರಾಂ ಮಹತ್ವವನ್ನು ಇದಿನಬ್ಬ ಫೌಂಡೇಶನ್ ಹಾಗೂ ಇಹ್ಯಾ  ಪ್ರತಿನಿಧಿಗಳು ವಿವರಿಸಿದರು. ಕೆಪಿ ಟ್ರಸ್ಟ್ ನಿರ್ದೇಶಕ ಸುಹೈಲ್ ಶೇಖ್ ಅವರು ಝೂಮ್ ಮೂಲಕ  ಸಮಾರಂಭದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದರು.

ಸದ್ಯದಲ್ಲಿಯೇ ಈ ಫೌಂಡೇಶನ್ ಪ್ರೋಗ್ರಾಂ ಅನ್ನು ರಾಜ್ಯದಾದ್ಯಂತ ಜಾರಿಗೊಳಿಸುವ ಉದ್ದೇಶ ಸಂಘಟಕರಿಗಿದೆ. ಈ ಫೌಂಡೇಶನ್ ಪ್ರೋಗ್ರಾಂನಲ್ಲಿ ಎಂಟು ಹಂತಗಳಿದ್ದು, ಪ್ರತಿಯೊಂದು ಹಂತವೂ ವಿದ್ಯಾರ್ಥಿಗಳಿಗೆ ಮುಂದೆ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಹಕರಿಸಲಿದೆ.  ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ, ಐಕ್ಯೂ,  ಸಂವಹನಾ ಕೌಶಲ್ಯ, ವ್ಯಕ್ತಿತ್ವ ವಿಕಸನ ಹಾಗೂ  ಸಮಯದ ಸದ್ಬಳಕೆಯತ್ತ ಈ ಪ್ರೋಗ್ರಾಂ ಹೆಚ್ಚಿನ ಆದ್ಯತೆ ನೀಡುತ್ತದೆ.  ಈ ಆನ್ಲೈನ್ ಮೊಡ್ಯೂಲ್ ಪ್ರೋಗ್ರಾಂನಲ್ಲಿ ಪ್ರಿ-ರೆಕಾರ್ಡೆಡ್ ವೀಡಿಯೊ ತರಗತಿಗಳಿರಲಿದೆ.

ಈ ಆನ್ಲೈನ್  ಪ್ರೋಗ್ರಾಂ ವಾರಾಂತ್ಯಗಳಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳ ಸಾಮಾನ್ಯ ಶೈಕ್ಷಣಿಕ ತರಗತಿಗಳಿಗೆ ಯಾವುದೇ ಅಡ್ಡಿಯುಂಟಾಗದಂತೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ನಾಲೆಜ್ ಪಾರ್ಕ್ ವೆಬ್‍ಸೈಟ್‍ http://kptrust.in ಗೆ ಭೇಟಿ ನೀಡಬಹುದು.

ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭಗೊಂಡಿದ್ದು  ಮೊದಲನೇ ಬ್ಯಾಚಿಗೆ ನೋಂದಣಿ ಡಿಸೆಂಬರ್ 5, 2020ಗೆ ಕೊನೆಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಮಣಿಪಾಲದ ಅಲ್ ಇಬಾದಹ್ ಇಂಡಿಯನ್ ಸ್ಕೂಲ್‍ನಲ್ಲಿರುವ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಮೊ : +918197850270
ಮೊ : +916366098037
ವಾಟ್ಸ್ಆ್ಯಪ್ : +917795889900

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News