ಬಾಬಾ ಆಮ್ಟೆ ಮೊಮ್ಮಗಳು, ಸಮಾಜ ಸೇವಕಿ ಶೀತಲ್ ಆತ್ಮಹತ್ಯೆ

Update: 2020-11-30 13:24 GMT

ಚಂದ್ರಾಪುರ: ಖ್ಯಾತ ಸಮಾಜ ಸೇವಕಿ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬಾಬಾ ಆಮ್ಟೆ ಅವರ ಮೊಮ್ಮಗಳು ಡಾ. ಶೀತಲ್ ಆಮ್ಟೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಆನಂದವನದಲ್ಲಿರುವ ಆಶ್ರಮದಲ್ಲಿ ಸೋಮವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಶೀತಲ್ ಅವರು ಇಂದು ಬೆಳಗ್ಗೆ ಇಂಜೆಕ್ಷನ್ ತೆಗೆದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಶೀತಲ್ ಅವರ ಆತ್ಮಹತ್ಯೆಯ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ  ಎಂದು ವರೋರ ಪೊಲೀಸ್ ಸ್ಟೇಶನ್ ನ ಪೊಲೀಸ್ ಅಧಿಕಾರಿ ಪಿ. ಪೆಂಡರ್ಕರ್  ತಿಳಿಸಿದ್ದಾರೆ.

ಕುಷ್ಠರೋಗಿಗಳಿಗೆ ಆಪತ್ಪಾಂಧವರಾಗಿರುವ ಮುರಳೀಧರ ಡಿ. ಆಮ್ಟೆ ಅಲಿಯಾಸ್ ಬಾಬಾ ಆಮ್ಟೆ ಅವರ ಮೊಮ್ಮಗಳಾಗಿರುವ ಶೀತಲ್ ಅಮ್ಟೆ-ಕರಾಜ್ಕಿ ಅವರು ಮಹಾರೋಗಿ ಸೇವಾ ಸಮಿತಿಯ ಸಿಇಒ ಆಗಿದ್ದರು. ಈ ಸಂಸ್ಥೆಯು ಕುಷ್ಟರೋಗಿಗಳ ಆರೈಕೆಗೆ ಶ್ಲಾಘನೀಯ ಕೆಲಸ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News