ಫ್ರಾನ್ಸ್: ನಾಲ್ವರು ಪೊಲೀಸರ ವಿರುದ್ಧ ಮೊಕದ್ದಮೆ ದಾಖಲು

Update: 2020-11-30 16:43 GMT
ಸಾಂದರ್ಭಿಕ ಚಿತ್ರ

ಪ್ಯಾರಿಸ್ (ಫ್ರಾನ್ಸ್), ನ. 30: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಕರಿಯ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರು ಪೊಲೀಸರ ವಿರುದ್ಧ ಮೊಕದ್ದಮೆ ದಾಖಲಾಗಿದೆ ಹಾಗೂ ಈ ಪೈಕಿ ಇಬ್ಬರನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಂಗ ಮೂಲಗಳು ಸೋಮವಾರ ತಿಳಿಸಿವೆ.

ಸರಕಾರಿ ಅಧಿಕಾರಿಯೊಬ್ಬ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪವನ್ನು ನ್ಯಾಯಾಲಯವು ಮೂವರು ಪೊಲೀಸರ ವಿರುದ್ಧ ಹೊರಿಸಿದೆ. ಇಬ್ಬರನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಹಾಗೂ ಇತರ ಇಬ್ಬರಿಗೆ ಶರತ್ತುಬದ್ಧ ಜಾಮೀನು ನೀಡಲಾಗಿದೆ.

ಈ ತಿಂಗಳ ಆರಂಭದಲ್ಲಿ, ಸಂಗೀತ ನಿರ್ಮಾಪಕ ಮೈಕಲ್ ಝೆಕ್ಲರ್ ತನ್ನ ಸಂಗೀತ ಸ್ಟುಡಿಯೊ ಪ್ರವೇಶಿಸುತ್ತಿದ್ದಾಗ ಅವರ ಮೇಲೆ ಮೂವರು ಪೊಲೀಸರು ಹಲವು ನಿಮಿಷಗಳ ಕಾಲ ಹಲ್ಲೆ ನಡೆಸಿದ್ದರು ಹಾಗೂ ಅವರನ್ನು ಜನಾಂಗೀಯ ನಿಂದನೆಗೆ ಒಳಪಡಿಸಿದ್ದರು. ಈ ಘಟನೆಯನ್ನು ತೋರಿಸುವ ವೀಡಿಯೊವೊಂದು ವೆಬ್‌ಸೈಟೊಂದರಲ್ಲಿ ಪ್ರಸಾರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News