ಮತಾಂತರಗೊಳ್ಳಲು ಪತ್ನಿಗೆ ಪೀಡನೆ ಆರೋಪ: ವ್ಯಕ್ತಿಯ ಬಂಧನ

Update: 2020-11-30 16:57 GMT

ಭೋಪಾಲ್, ನ.30: ಮತಾಂತರವಾಗುವಂತೆ ಪತಿ ಕಿರುಕುಳ ನೀಡುತ್ತಿರುವ ಬಗ್ಗೆ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮದ್ಯಪ್ರದೇಶದ ಪೊಲೀಸರು ಹೇಳಿದ್ದಾರೆ.

ಮಧ್ಯಪ್ರದೇಶದ ಶಹದೋಲ್ ನಗರದ ನಿವಾಸಿ ಹಿಂದು ಧರ್ಮದ ಮಹಿಳೆ ಇರ್ಷಾದ್ ಖಾನ್ ಎಂಬಾತನ ವಿರುದ್ಧ ದೂರು ನೀಡಿದ್ದಾಳೆ. 2018ರಿಂದ ಖಾನ್‌ನೊಂದಿಗೆ ವಾಸಿಸುತ್ತಿದ್ದು ಈಗ ಅವರ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮತ್ತು ಉರ್ದು ಹಾಗೂ ಅರೆಬಿಕ್ ಭಾಷೆಗಳನ್ನು ಕಲಿಯುವಂತೆ ಪತಿ ಮತ್ತು ಆತನ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 ದೂರಿನ ಹಿನ್ನೆಲೆಯಲ್ಲಿ, 1968ರ ಮಧ್ಯಪ್ರದೇಶ ಧಾರ್ಮಿಕ ಹಕ್ಕು ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಇರ್ಷಾದ್ ಖಾನ್‌ನನ್ನು ಬಂಧಿಸಲಾಗಿದೆ ಎಂದು ಶಹದೋಲ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಭರತ್ ದುಬೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News