ಶ್ವೇತಭವನಕ್ಕೆ ಸರ್ವ-ಮಹಿಳಾ ಸಂವಹನ ತಂಡ ಘೋಷಿಸಿದ ಬೈಡನ್

Update: 2020-11-30 16:52 GMT

ವಾಶಿಂಗ್ಟನ್, ನ. 30: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ರವಿವಾರ ಶ್ವೇತಭವನಕ್ಕೆ ಸರ್ವ-ಮಹಿಳಾ ಸಂವಹನ ತಂಡವನ್ನು ಘೋಷಿಸಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಪ್ರಥಮ ಎಂದು ಅವರ ಕಚೇರಿ ಹೇಳಿದೆ.

ಈ ಪೈಕಿ ಜೆನ್ ಪ್ಸಾಕಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 41 ವರ್ಷದ ಪ್ಸಾಕಿ ಈ ಹಿಂದೆ ಹಲವು ಹಿರಿಯ ಹುದ್ದೆಗಳನ್ನು ನಿಭಾಯಿಸಿದ್ದರು. ಅವರು ಬರಾಕ್ ಒಬಾಮ ಆಡಳಿತದಲ್ಲಿ ಶ್ವೇತಭವನದ ಸಂವಹನ ನಿರ್ದೇಶಕಿಯಾಗಿದ್ದರು.

‘‘ಸರ್ವಮಹಿಳಾ ಶ್ವೇತಭವನ ಸಂವಹನ ತಂಡವವನ್ನು ನೇಮಿಸಲು ನಾನು ಹೆಮ್ಮೆ ಪಡುತ್ತೇನೆ’’ ಎಂದು ಬೈಡನ್ ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News