×
Ad

ಬಿಜೆಪಿಯ ರಾಜ್ಯಸಭಾ ಸಂಸದ ಕೋವಿಡ್-19ಗೆ ಬಲಿ

Update: 2020-12-01 20:40 IST

ಹೊಸದಿಲ್ಲಿ: ಗುಜರಾತ್ ನ ರಾಜ್ಯಸಭಾ ಸಂಸದ ಅಭಯ್ ಭಾರಧ್ವಾಜ್ ಮಂಗಳವಾರ ಕೋವಿಡ್ -19ಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಅರ್ಜುನ್ ಮೋಧವಾಡಿಯಾ ಅವರು ಭಾರದ್ವಾಜ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

66ರ ವಯಸ್ಸಿನ ಭಾರಧ್ವಾಜ್ ಖ್ಯಾತ ವಕೀಲರಾಗಿದ್ದರು. ಕಳೆದ ವರ್ಷ ಮೇಲ್ಮನೆಗೆ ಆಯ್ಕೆಯಾಗಿದ್ದರು.

ಆಗಸ್ಟ್ ನಲ್ಲಿ ಪಕ್ಷದ ಸಭೆಯಲ್ಲಿ ಹಾಗೂ ರಾಜ್ ಕೋಟ್ ನಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಕೊರೋನ ವೈರಸ್ ಸೋಂಕು ತಗಲಿತ್ತು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News