×
Ad

ಶರ್ಟ್ ಧರಿಸದೇ ವಿಚಾರಣೆಗೆ ಹಾಜರು: ಸುಪ್ರೀಂಕೋರ್ಟ್ ಅಸಮಾಧಾನ

Update: 2020-12-01 22:11 IST

ಹೊಸದಿಲ್ಲಿ, ಡಿ.1: ಪ್ರಕರಣದ ವಿಚಾರಣೆ ವೀಡಿಯೊ ಕಾನ್ಪರೆನ್ಸಿಂಗ್ ಮೂಲಕ ನಡೆಸಿದ ಸಂದರ್ಭ ಶರ್ಟ್ ಧರಿಸದ ಓರ್ವ ವ್ಯಕ್ತಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು ಈ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ಸೂಚಿಸಿದೆ.

ದೇಶದಲ್ಲಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದೆ. ಏಳೆಂಟು ತಿಂಗಳಿಂದ ಇದೇ ರೀತಿಯ ವೀಡಿಯೊ ಕಾನ್ಫರೆನ್ಸಿಂಗ್ ನಡೆಯುತ್ತಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾರಿದ್ದ ನ್ಯಾಯಪೀಠ ಹೇಳಿದೆ.

ಅಕ್ಟೋಬರ್ 26ರಂದೂ ಇದೇ ರೀತಿಯ ಘಟನೆ ನಡೆದಿತ್ತು. ನ್ಯಾ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ನಡೆಸುತ್ತಿದ್ದ ವೀಡಿಯೊ ಕಾನ್ಪರೆನ್ಸಿಂಗ್ ವಿಚಾರಣೆ ಸಂದರ್ಭ ಓರ್ವ ನ್ಯಾಯವಾದಿ ಶರ್ಟ್ ಧರಿಸದೆ ಕಾಣಿಸಿಕೊಂಡಿದ್ದು ಈ ಬಗ್ಗೆ ನ್ಯಾಯಾಧೀಶರು ಅಸಮಾಧಾನ ಸೂಚಿಸಿದ್ದರು. ಆ ನ್ಯಾಯವಾದಿ ತನ್ನ ಮನೆಯಲ್ಲಿ ದೇವರ ಪೂಜೆ ನಡೆಸುತ್ತಿದ್ದರು ಮತ್ತು ವೀಡಿಯೊ ಕಾನ್ಫರೆನ್ಸಿಂಗ್‌ಗೆ ತನ್ನನ್ನೂ ಸೇರಿಸಿಕೊಂಡಿದ್ದು ಅವರಿಗೆ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News