ಎಲ್ಲರಿಗೂ ಕೋವಿಡ್ ಲಸಿಕೆ ಇಲ್ಲ : ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್

Update: 2020-12-02 04:10 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಕೊರೋನ ವೈರಸ್ ಲಸಿಕೆ ಅನುಮೋದನೆ ಪಡೆದ ಬಳಿಕ ದೇಶದಲ್ಲಿ ಸಾರ್ವತ್ರಿಕವಾಗಿ ಕೋವಿಡ್-19 ಲಸಿಕೆ ನೀಡುವ ಬಗ್ಗೆ ಸರ್ಕಾರ ಎಂದೂ ಮಾತನಾಡಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಪ್ರತಿಕಾಯ ಶಕ್ತಿ ಹೊಂದಿದ ಜನಸಮೂಹವನ್ನು ಹೆಚ್ಚಿಸುವ ಮೂಲಕ ಕೊರೋನ ಹರಡುವಿಕೆ ಸರಣಿಯನ್ನು ತುಂಡರಿಸುವುದು ನಮ್ಮ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರ ಇದಕ್ಕೂ ಮುನ್ನ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸಿದ್ದು, ಒಂದು ಕೋಟಿ ಆರೋಗ್ಯ ಸೇವಾ ವೃತ್ತಿಪರರಿಗೆ, ಪೊಲೀಸರಿಗೆ ಮತ್ತು ಸಶಸ್ತ್ರ ಪಡೆ ಸಿಬ್ಬಂದಿಗೆ 50 ವರ್ಷ ಮೇಲ್ಪಟ್ಟವರಿಗೆ ಹಾಗೂ ಇತರ ಮಾರಕ ರೋಗಗಳನ್ನು ಹೊಂದಿದ 50 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ನೀಡಲು ನಿರ್ಧರಿಸಿತ್ತು.

"ಇಡೀ ದೇಶದಲ್ಲಿ ಲಸಿಕೆ ಹಾಕಿಸುವ ಬಗ್ಗೆ ಸರ್ಕಾರ ಎಂದೂ ಭರವಸೆ ನೀಡಿಲ್ಲ" ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಭೂಷಣ್ ಉತ್ತರಿಸಿದರು.

"ಇದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವ ಮುನ್ನ ವಾಸ್ತವ ಮಾಹಿತಿಗಳನ್ನು ತಿಳಿದುಕೊಂಡು ವಿಶ್ಲೇಷಿಸಬೇಕಾಗುತ್ತದೆ. ಆದ್ದರಿಂದ ಇಡೀ ದೇಶದಲ್ಲಿ ಲಸಿಕೆ ಹಾಕಿಸುವ ಬಗ್ಗೆ ಎಂದೂ ಮಾತನಾಡಿಲ್ಲ. ಆರಂಭಿಕ ಹಂತದಲ್ಲಿ ಸಣ್ಣ ಸಂಖ್ಯೆಯ ಜನತೆಗಷ್ಟೇ ಲಸಿಕೆ ಹಾಕಲಾಗುತ್ತದೆ ಹಾಗೂ ಮಾಸ್ಕ್ ಪ್ರಮುಖ ಪಾತ್ರ ವಹಿಸುತ್ತದೆ" ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರತವಾಗಿರುವ ಮೂರು ಘಟಕಗಳಿಗೆ ಭೇಟಿ ನೀಡಿದ ಬೆನ್ನಲ್ಲೇ ಭೂಷಣ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News