ಮುಂದುವರಿದ ರೈತರ ಪ್ರತಿಭಟನೆ: ದಿಲ್ಲಿ-ನೊಯ್ಡಾ ಗಡಿ ಮುಚ್ಚಿದ ಪೊಲೀಸರು

Update: 2020-12-02 07:14 GMT

ಹೊಸದಿಲ್ಲಿ: ರೈತರು ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನೊಯ್ಡಾ-ದಿಲ್ಲಿ ಗಡಿಯಲ್ಲಿ ಪ್ರತಿಭಟನೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯನ್ನು ಉತ್ತರಪ್ರದೇಶಕ್ಕೆ ಸಂಪರ್ಕಿಸುವ ಮುಖ್ಯ ಮಾರ್ಗವನ್ನು ಬುಧವಾರ ಮುಚ್ಚಲಾಗಿದೆ.

ಗೌತಮ್ ಬುದ್ಧ ದ್ವಾರದ ಸಮೀಪ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ಜನದಟ್ಟಣೆ ಉಂಟಾಗಿರುವ ಕಾರಣ ನೊಯ್ಡಾ-ಲಿಂಕ್ ರೋಡ್‌ನ ಚಿಲ್ಲಾ ಬಾರ್ಡರ್‌ನ್ನು ಮುಚ್ಚಲಾಗಿದೆ. ಹೀಗಾಗಿ ಪ್ರಯಾಣಿಕರು ಚಿಲ್ಲಾ ಮಾರ್ಗವನ್ನು ಬಳಸದೆ ದಿಲ್ಲಿ-ನೊಯ್ಡಾ ಡೈರೆಕ್ಟ್(ಡಿಎನ್‌ಡಿ) ಅಥವಾ ಕಲಿಂದಿ ಕುಂಜ್ ರೋಡನ್ನು ಬಳಸಬೇಕು ಎಂದು ದಿಲ್ಲಿ ಟ್ರಾಫಿಕ್ ಪೊಲೀಸ್ ತಿಳಿಸಿದೆ.

ಪಶ್ಚಿಮ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿನ ಭಾರತೀಯ ಕಿಸಾನ್ ಯೂನಿಯನ್ ಹಾಗೂ ಇತರ ಸಂಘಟನೆಗಳ ನೂರಾರು ರೈತರು ಮಂಗಳವಾರ ಸಂಜೆ ಉತ್ತರಪ್ರದೇಶದ ಗಡಿಯಲ್ಲಿ ಸೇರಿದ್ದಾರೆ. ದಿಲ್ಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಹಾಗೂ ಹರ್ಯಾಣ ರೈತರನ್ನು ಸೇರಿಕೊಳ್ಳಲು ಬಯಸಿದ್ದಾರೆ. ಆದರೆ ಉತ್ತರಪ್ರದೇಶ ರೈತರು ದಿಲ್ಲಿಯತ್ತ ತೆರಳುವುದನ್ನು ತಡೆಯಲು ನೊಯ್ಡಾ ಹಾಗೂ ದಿಲ್ಲಿ ಗಡಿಭಾಗದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News