ಈ ದೇಶದಲ್ಲಿ ಎಲ್ಲ ನಿವಾಸಿಗಳಿಗೆ ಉಚಿತ ಕೊರೋನ ಲಸಿಕೆ

Update: 2020-12-02 17:04 GMT

ಟೋಕಿಯೊ (ಜಪಾನ್), ಡಿ. 2: ಜಪಾನ್ ತನ್ನ ಎಲ್ಲ ನಿವಾಸಿಗಳಿಗೆ ಕೊರೋನ ವೈರಸ್ ಲಸಿಕೆಗಳನ್ನು ಉಚಿತವಾಗಿ ನೀಡಲಿದೆ. ಈ ಸಂಬಂಧ ಅದು ಬುಧವಾರ ಮಸೂದೆಯೊಂದನ್ನು ಅಂಗೀಕರಿಸಿದೆ.

ಜಪಾನ್‌ನ 12.6 ಕೋಟಿ ನಿವಾಸಿಗಳ ಎಲ್ಲ ಲಸಿಕೆ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಹೇಳುವ ಮಸೂದೆಗೆ ಸಂಸತ್ತಿನ ಮೇಲ್ಮನೆ ಬುಧವಾರ ಅಂಗೀಕಾರ ನೀಡಿದೆ. ಮಸೂದೆಗೆ ಈಗಾಗಲೇ ಸಂಸತ್ತಿನ ಕೆಳಮನೆ ಅನುಮೋದನೆ ನೀಡಿದೆ.

ಜಪಾನ್ 6 ಕೋಟಿ ಜನರಿಗೆ ಬೇಕಾಗುವಷ್ಟು ಕೋವಿಡ್-19 ಲಸಿಕೆಗಳಿಗಾಗಿ ಈಗಾಗಲೇ ಅಮೆರಿಕದ ಫೈಝರ್ ಕಂಪೆನಿಗೆ ಬೇಡಿಕೆ ಸಲ್ಲಿಸಿದೆ. 2.5 ಕೋಟಿ ಲಸಿಕೆಗಳನ್ನು ಅದು ಅಮೆರಿಕದ್ದೇ ಆದ ಮೋಡರ್ನಾ ಕಂಪೆನಿಯಿಂದ ಪಡೆದುಕೊಳ್ಳಲಿದೆ.

 ಅದೇ ವೇಳೆ, ಅದು ಬ್ರಿಟನ್‌ನ ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿಯಿಂದಲೂ 12 ಕೋಟಿ ಲಸಿಕಾ ಡೋಸ್‌ಗಳನ್ನು ಖರೀದಿಸಲಿದೆ.

ಜಪಾನ್‌ನಲ್ಲಿ ಸುಮಾರು 1.50 ಲಕ್ಷ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸುಮಾರು 2,100 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News