ತಿರುವನಂತಪುರದ ಮೂಲಕ ಹಾದು ಹೋಗಲಿರುವ ಚಂಡಮಾರುತ

Update: 2020-12-02 17:38 GMT

ತಿರುವನಂತಪುರ, ಡಿ. 2: ಬೆರುವಿ ಚಂಡಮಾರುತದ ಕೇಂದ್ರ ಬಿಂದು ತಿರುವನಂತಪುರ ಹಾಗೂ ಕನ್ಯಾಕುಮಾರಿ ಮೂಲಕ ಹಾದು ಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಚಂಡ ಮಾರುತ ದಕ್ಷಿಣ ತಿರುವನಂತಪುರದ ಮೂಲಕ ಹಾದು ಹೋಗುವ ಸಂದರ್ಭ ತಿರುವನಂತಪುರದ ಸುತ್ತಮುತ್ತ ಭಾರೀ ಮಳೆ ಸುರಿಯಲಿದೆ ಹಾಗೂ ಬಿರುಗಾಳಿ ಬೀಸಲಿದೆ. ಈ ಚಂಡಮಾರುತ ತಮಿಳುನಾಡಿನ ಕನ್ಯಾಕುಮಾರಿ ಹಾಗೂ ಪಂಪನ್ ನಡುವಿನ ಕರಾವಳಿಗೆ ಶುಕ್ರವಾರ ಬೆಳಗ್ಗೆ ಅಪ್ಪಳಿಸುವ ಸಾಧ್ಯತೆ ಇದೆ. ದಕ್ಷಿಣ ತಮಿಳುನಾಡಿಗೆ ಅಪ್ಪಳಿಸಿದ ಬಳಿಕ ಈ ಚಂಡ ಮಾರುತ ತಿರುವನಂತಪುರ ಜಿಲ್ಲೆಯ ದಕ್ಷಿಣ ಭಾಗದ ಮೂಲಕ ಅರಬ್ಬಿ ಸಮುದ್ರದತ್ತ ಸಾಗಲಿದೆ. ತಿರುವನಂತಪುರ ದಾಟಿದ ಬಳಿಕ ಈ ಚಂಡಮಾರುತ ದುರ್ಬಲವಾಗಲಿದೆ ಹಾಗೂ ಅರಬ್ಬಿ ಸಮುದ್ರಕ್ಕೆ ತಲುಪುವಾಗ ನಿಮ್ನ ಒತ್ತಡವಾಗಿ ಬದಲಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಚಂಡಮಾರುತದ ಪರಿಣಾಮ ದಕ್ಷಿಣ ಕೇರಳದಲ್ಲಿ ಶನಿವಾರದ ವರೆಗೆ ಭಾರೀ ಮಳೆ ಸುರಿಯಲಿದೆ ಹಾಗೂ ಬಿರುಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News