ದಿಲ್ಲಿ ಚಲೋ ಚಳವಳಿಗೆ ರಾಜಸ್ಥಾನ ರೈತರ ಬೆಂಬಲ

Update: 2020-12-03 07:21 GMT

ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 7 ದಿನಗಳಿಂದ ದಿಲ್ಲಿ ಹೊರವಲಯದ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಹಾಗೂ ಹರ್ಯಾಣ ರೈತರಿಗೆ ಗುರುವಾರ ರಾಜಸ್ಥಾನದ ರೈತರು ಬೆಂಬಲ ನೀಡಿದ್ದಾರೆ.

ಸಿಂಘು (ದಿಲ್ಲಿ-ಹರ್ಯಾಣ)ಗಡಿ ತಲುಪಿರುವ ರಾಜಸ್ಥಾನದ ಕೆಲವು ರೈತರ ಹೋರಾಟಗಾರರು ಕೃಷಿ ಕಾಯ್ದೆಗಳ ವಿಚಾರವಾಗಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ 500ಕ್ಕೂ ಹೆಚ್ಚು ರೈತರು ರಾಜಸ್ಥಾನದಿಂದ ಇಲ್ಲಿಗೆ ಶೀಘ್ರದಲ್ಲೇ ಬಂದು ತಲುಪಲಿದ್ದಾರೆ. ಕಾಯ್ದೆ ಜಾರಿಯಿಂದ ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ತೊಂದರೆ ಇಲ್ಲ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಅವರು ಹೇಳುತ್ತಿರುವುದನ್ನು ಕಾಯ್ದೆಯಲ್ಲಿ ಉಲ್ಲೇಖಿಸಲು ಏನು ಸಮಸ್ಯೆ? ಎಂದು ರೈತರು ಪ್ರಶ್ನೆ ಮಾಡಿದ್ದಾರೆ.

ಪ್ರತಿಭಟನಾನಿರತ ರೈತರ ಸಂಖ್ಯೆಯು ಏರಿಕೆಯಾಗುತ್ತಲೇ ಇದೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವಿಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News