ಮದ್ರಾಸ್‌ ಹೈಕೋರ್ಟ್ ನ್ಯಾಯಾಧೀಶರಾಗಿ ಪತಿ-ಪತ್ನಿ ಪ್ರಮಾಣವಚನ

Update: 2020-12-03 17:33 GMT

 ಚೆನ್ನೈ: ಪತಿ ಹಾಗೂ ಪತ್ನಿ ಒಟ್ಟಿಗೆ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮದ್ರಾಸ್ ಹೈಕೋರ್ಟ್ ಗುರುವಾರ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಯಿತು. ಜಸ್ಟಿಸ್ ಮುರಳಿ ಶಂಕರ್ ಕುಪ್ಪುರಾಜು ಹಾಗೂ ಜಸ್ಟಿಸ್ ತಮಿಳ್‌ಸೆಲ್ವಿ ಟಿ.ವಲಯಪಾಳಯಂ ಅವರು ಇತರ 8 ಮಂದಿಯೊಂದಿಗೆ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ಸ್ವೀಕರಿಸಿದರು.

ನೂತನವಾಗಿ ಪ್ರಮಾಣವಚನ ಸ್ವೀಕರಿಸಿದವರನ್ನು ಉದ್ದೇಶಿಸಿ ಸ್ವಾಗತ ಭಾಷಣ ಮಾಡಿದ ಅಡ್ವಕೇಟ್ ಜನರಲ್ ವಿಜಯ ನಾರಾಯಣನ್, "ಮದ್ರಾಸ್ ಹೈಕೋರ್ಟ್‌ನಲ್ಲಿ ಇದೇ ಮೊದಲ ಬಾರಿ ಪತಿ-ಪತ್ನಿ ಒಂದೇ ದಿನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ''ಎಂದರು.

ಮುರಳಿ ಶಂಕರ್ ಅವರು ತಿರುಚಿಯಲ್ಲಿ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಹಾಗೂ ಸೆಶನ್ಸ್ ನ್ಯಾಯಾಧೀಶರರಾಗಿ ಸೇವೆ ಸಲ್ಲಿಸಿದ್ದರೆ, ತಮಿಳುಸೆಲ್ವಿ ಟಿ.ವಲಯಪಾಳಯವರು ಮದ್ರಾಸ್ ಹೈಕೋರ್ಟಿನ ಮದುರೈ ಪೀಠದ ರಿಜಿಸ್ಟ್ರಾರ್(ಜ್ಯುಡಿಶಿಯಲ್)ಹುದ್ದೆಯನ್ನು ನಿಭಾಯಿಸಿದ್ದರು. ಈ ಇಬ್ಬರು 1996ರಲ್ಲಿ ವಿವಾಹವಾಗಿದ್ದರು.

ಕಳೆದ ವರ್ಷ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್‌ನಲ್ಲಿ ಪತಿ-ಪತ್ನಿ ಒಟ್ಟಿಗೆ ಒಂದೇ ದಿನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜಸ್ಟಿಸ್‌ಗಳಾದ ವಿವೇಕ್ ಪುರಿ ಹಾಗೂ ಅರ್ಚನಾ ಪುರಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News