ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಟಿಆರ್ ಎಸ್ ಗೆ ಮುನ್ನಡೆ

Update: 2020-12-04 09:10 GMT

ಹೈದರಾಬಾದ್: ಭಾರೀ ಜಿದ್ದಾಜಿದ್ದಿನಿಂದ ಕೂಡಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ (ಜಿಎಚ್ ಎಂಸಿ) ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಮತ ಎಣಿಕೆಯ ಆರಂಭದಲ್ಲಿ 85 ವಾರ್ಡ್ ಗಳಲ್ಲಿ ಮುನ್ನಡೆಯಲ್ಲಿದ್ದ ಬಿಜೆಪಿ ಈಗ ಹಿನ್ನಡೆ ಅನುಭವಿಸಿದೆ. ಈಗ  ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್) 62 ವಾರ್ಡ್ ಗಳಲ್ಲಿ ಮುನ್ನಡೆ ಪಡೆದಿದೆ. ಎಐಎಂಐಎಂ 31, ಬಿಜೆಪಿ 22ರಲ್ಲಿ  ಹಾಗೂ ಕಾಂಗ್ರೆಸ್ 3 ವಾರ್ಡ್ ಗಳಲ್ಲಿ ಮುನ್ನಡೆಯಲ್ಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಾಜಿ ಮೇಯರ್ ಮರು ಆಯ್ಕೆ

ಎಐಎಂಐಎಂ ಮುಖಂಡ, ಮಾಜಿ ಮೇಯರ್ ಮುಹಮ್ಮದ್ ಮಜೀದ್ ಹುಸೇನ್ ಮೆಹದಿಪಟ್ನಂ ವಾರ್ಡ್ ನಿಂದ ಮರು ಆಯ್ಕೆಯಾಗಿದ್ದಾರೆ.

ಟಿಆರ್ ಎಸ್ ಅಭ್ಯರ್ಥಿ ರಾಜಕುಮಾರ್ ಪಟೇಲ್ ಯೂಸುಫ್ ಗಡ ವಿಭಾಗದಿಂದ ಆಯ್ಕೆಯಾಗಿದ್ದಾರೆ.

ಎಐಎಂಐಎಂ ಈ ತನಕ 14 ಸೀಟುಗಳಲ್ಲಿ ಜಯ ಸಾಧಿಸಿದೆ.

2016ರ ಚುನಾವಣೆಯಲ್ಲಿ ಟಿಆರ್ ಎಸ್ 99, ಎಐಎಂಐಎಂ 44, ಬಿಜೆಪಿ 4, ಕಾಂಗ್ರೆಸ್ 2 ಹಾಗೂ ಟಿಡಿಪಿ 1 ಸ್ಥಾನಗಳನ್ನು ಗೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News