ಸಿಎಎ ಪ್ರತಿಭಟನಾಕಾರರ ವಿರುದ್ಧ ಉ.ಪ್ರ. ಸರಕಾರದಿಂದ ಹಾನಿ ವಸೂಲಾತಿ ನೋಟಿಸ್

Update: 2020-12-04 14:52 GMT

ಲಕ್ನೋ, ಡಿ. 4: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭ ಸಾರ್ವಜನಿಕ ಸೊತ್ತಿಗೆ ಹಾನಿ ಎಸಗಿದ ಆರೋಪಕ್ಕೆ ಸಂಬಂಧಿಸಿ ಉತ್ತರಪ್ರದೇಶ ಸರಕಾರದಿಂದ ವಸೂಲಾತಿ ನೋಟಿಸ್ ಸ್ವೀಕರಿಸಿದ್ದ ಸೈಯದ್ ಸೈಫ್ ಅಬ್ಬಾಸ್ ನಕ್ವಿ ದಾಖಲಿಸಿದ ದೂರಿನ ಮುಂದಿನ ವಿಚಾರಣೆ ವರೆಗೆ ಎಲ್ಲಾ ಪ್ರಕ್ರಿಯೆಗಳು ಹಾಗೂ ದಬ್ಬಾಳಿಕೆಯ ಕ್ರಮಕ್ಕೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಗುರುವಾರ ತಡೆಯಾಜ್ಞೆ ವಿಧಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ವರೆಗೆ ನಕ್ವಿ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿ ಅಲೋಕ್ ಸಿಂಗ್ ಹಾಗೂ ಕರುಣೇಶ್ ಸಿಂಗ್ ಪವಾರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಉತ್ತರಪ್ರದೇಶ ಸರಕಾರಕ್ಕೆ ಆದೇಶಿಸಿದೆ. ‘‘ಪ್ರತಿ ಅಪಿಡವಿಟ್ ಸಲ್ಲಿಸಲು ಪ್ರತಿವಾದಿ ರಾಜ್ಯ ಸರಕಾರದ ವಕೀಲರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಅದಕ್ಕೆ ಪ್ರತಿ ವಾದದ ಅಫಿಡವಿಟ್ ಸಲ್ಲಿಸಲು ದೂರುದಾರ ನಕ್ವಿ ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ’’ ಎಂದು ನ್ಯಾಯಾಲಯದ ಆದೇಶ ಹೇಳಿದೆ. ಈ ನಡುವೆ ದೂರುದಾರರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News