ಬಯೋಎನ್‌ಟೆಕ್ ಸ್ಥಾಪಕ ಉಗುರ್ ಸಾಹಿನ್ ಈಗ ಜಗತ್ತಿನ 493ನೇ ಅತಿ ಶ್ರೀಮಂತ

Update: 2020-12-04 16:52 GMT

ಬರ್ಲಿನ್ (ಜರ್ಮನಿ), ಡಿ. 4: ಫೈಝರ್-ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆಗೆ ಈ ವಾರ ಬ್ರಿಟನ್ ಅನುಮೋದನೆ ನೀಡಿದ ಬಳಿಕ, ಬಯೋಎನ್‌ಟೆಕ್ ಸಂಸ್ಥೆಯ ಸಹಸಂಸ್ಥಾಪಕ ಉಗುರ್ ಸಾಹಿನ್ ಗುರುವಾರ ಜಗತ್ತಿನ 500 ಅತಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಜರ್ಮನಿಯ ಬಯೋಎನ್‌ಟೆಕ್ ಕಂಪೆನಿ ಮತ್ತು ಅಮೆರಿಕದ ಔಷಧ ತಯಾರಿಕಾ ಕಂಪೆನಿ ಫೈಝರ್ ಜಂಟಿಯಾಗಿ ಕೊರೋನ ವೈರಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ.

ಬಯೋಎನ್‌ಟೆಕ್‌ನ ಶೇರುಗಳು ಈ ವಾರ 8 ಶೇಕಡದಷ್ಟು ಏರಿವೆ ಹಾಗೂ ಶೇರುಗಳು ಈ ವರ್ಷ 250 ಶೇಕಡಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಏರಿವೆ.

ಸಾಹಿನ್ ಈಗ ಭೂಮಿಯ ಮೇಲಿನ 493ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಹಾಗೂ ಅವರ ನಿವ್ವಳ ಸಂಪತ್ತು 5.1 ಬಿಲಿಯ ಡಾಲರ್ (ಸುಮಾರು 37,500 ಕೋಟಿ ರೂಪಾಯಿ) ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕ ತಿಳಿಸಿದೆ.

ಟರ್ಕಿ ಮೂಲದವರಾಗಿರುವ ಸಾಹಿನ್ ಮತ್ತು ಅವರ ಪತ್ನಿ ಓಝ್ಲೆಮ್ ತೌರೆಸಿ ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಜಾಗತಿಕ ಕ್ಲಿನಿಕಲ್ ಪರೀಕ್ಷೆಗಾಗಿ ಅವರು ಅಮೆರಿಕದ ಫೈಝರ್ ಔಷಧ ತಯಾರಿಕಾ ಕಂಪೆನಿಯೊಂದಿಗೆ ಕೈಜೋಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News