ಫೈಝರ್-ಬಯೋಎನ್‍ಟೆಕ್ ಕೋವಿಡ್ ಲಸಿಕೆ ಬಳಕೆಗೆ ಅನುಮೋದಿಸಿದ ಬಹರೈನ್

Update: 2020-12-05 08:25 GMT

ಮನಾಮ, ಬಹರೈನ್ : ಅಮೆರಿಕನ್ ಫಾರ್ಮಾ ಕಂಪೆನಿ ಫೈಝರ್, ಜರ್ಮನಿಯ ಬಯೋಎನ್‍ಟೆಕ್ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿರುವುದಾಗಿ ಬಹರೈನ್ ಶುಕ್ರವಾರ ಘೋಷಿಸಿದೆ. ಇದರೊಂದಿಗೆ ಈ ಲಸಿಕೆ ಬಳಕೆಗೆ ಬ್ರಿಟನ್ ನಂತರ ಅನುಮೋದನೆ ನೀಡಿದ ಎರಡನೇ ರಾಷ್ಟ್ರ ಬಹರೈನ್ ಆಗಿದೆ.

ಆದರೆ ಲಸಿಕೆ ಬಳಕೆ ಯಾವಾಗ ಆರಂಭಗೊಳ್ಳಲಿದೆ ಎಂಬುದರ ಕುರಿತು ಮೇಲಿನ ಮಾಹಿತಿ ನೀಡಿದ ರಾಷ್ಟ್ರೀಯ ಆರೋಗ್ಯ ನಿಯಂತ್ರಣಾ ಪ್ರಾಧಿಕಾರದ ಸಿಇಒ ಮರಿಯಮ್-ಅಲ್-ಜಲಹ್ಮ  ತಿಳಿಸಿಲ್ಲ.

ಚೀನಾದ ಸಿನೋಫಾರ್ಮ್ ಲಸಿಕೆಯನ್ನು ಕೋವಿಡ್ ಹೋರಾಟದ ಮುಂಚೂಣಿಯಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರಿಗೆ ನೀಡಲು ಬಹರೈನ್  ನವೆಂಬರ್ ತಿಂಗಳಲ್ಲಿ ಅನುಮತಿ ನೀಡಿತ್ತು.

ಬಹರೈನ್‍ನಲ್ಲಿ ಇಲ್ಲಿಯ ತನಕ 87,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 341 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News