ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿಯಾದ ಆಸ್ಟ್ರೇಲಿಯಾ ರಾಯಭಾರಿಯ ರಾಜೀನಾಮೆಗೆ ಒತ್ತಾಯ

Update: 2020-12-05 17:06 GMT

  ಹೊಸದಿಲ್ಲಿ : ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದ ಭಾರತದಲ್ಲಿನ ಆಸ್ಟ್ರೇಲಿಯಾ ರಾಯಭಾರಿ ಬೇರ್ರಿ ಒ' ಫೆರೆಲ್ಲ್ ಅವರು  ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಟೀಕೆಗೊಳಗಾಗಿದ್ದಾರೆ ಹಾಗೂ ಅಲ್ಲಿನ ವಿಪಕ್ಷ ಸಂಸದೆಯೊಬ್ಬರು ಒ' ಫೆರೆಲ್ಲ್ ಅವರ ರಾಜೀನಾಮೆಗೂ ಆಗ್ರಹಿಸಿದ್ದಾರೆ,.

ನವೆಂಬರ್ 11ರಂದು ಟ್ವೀಟ್ ಮಾಡಿದ್ದ ಬೇರ್ರಿ ತಾವು  ನಾಗ್ಪುರ್‍ನಲ್ಲಿ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿರುವ ಬಗ್ಗೆ ಬರೆದುಕೊಂಡಿದ್ದರಲ್ಲದೆ  ಕೋವಿಡ್ ಸಾಂಕ್ರಾಮಿಕದ ಸಂದರ್ಭ ಆರೆಸ್ಸೆಸ್ ಸಲ್ಲಿಸಿದ್ದ ಸಮುದಾಯ ಸೇವೆಯನ್ನೂ ಶ್ಲಾಘಿಸಿದ್ದರು.

ಈ ವಿಚಾರ ಬಹಿರಂಗಗೊಳ್ಳುತ್ತಲೇ ಆಸ್ಟ್ರೇಲಿಯಾದ  ಹಲವು ಮಂದಿ ಹಾಗೂ ಮಾನವ ಹಕ್ಕು ಕಾರ್ಯಕರ್ತರು ಈ ಭೇಟಿಯನ್ನು ವಿರೋಧಿಸಿದ್ದರು. ಇದೀಗ ಮೂರು ವಾರಗಳ ತರುವಾಯ ಇದೇ ವಿಚಾರವನ್ನು ಆಸ್ಟ್ರೇಲಿಯಾ ಸಂಸತ್ತಿನ ಮೇಲ್ಮನೆಯಲ್ಲಿ  ಸದಸ್ಯೆ ಜಾನೆಟ್ ರೈಸ್ ಡಿಸೆಂಬರ್ 1ರಂದು ಪ್ರಸ್ತಾಪಿಸಿದರು 

"ಹಿಟ್ಲರ್ ಬಗ್ಗೆ ಅಭಿಮಾನವನ್ನು ತೋರ್ಪಡಿಸುವ ಒಂದು ಫ್ಯಾಸಿಸ್ಟ್ ಸಂಘಟನೆ ಆರಸ್ಸೆಸ್ ಆಗಿದೆ,'' ಎಂದೂ ಅವರು ಹೇಳಿದರು. ಆರೆಸ್ಸೆಸ್ಸಿನ `ಹಿಂದು ರಾಷ್ಟ್ರ' ಪ್ರತಿಪಾದನೆ ಕುರಿತೂ ಉಲ್ಲೇಖಿಸಿದರಲ್ಲದೆ ''ಈ ಸಂಘಟನೆ ಹಿಂದೂಯೇತರರು, ಮುಖ್ಯವಾಗಿ ಮುಸ್ಲಿಂ ಹಿನ್ನೆಲೆಯವರ ಮೇಲಿನ ದಬ್ಬಾಳಿಕೆ  ಪ್ರೋತ್ಸಾಹಿಸುತ್ತಿದೆ''' ಎಂದೂ  ಹೇಳಿ ಫೆರೆಲ್ಲ್ ಅವರ ರಾಜೀನಾಮೆಗೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News