ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ ಗಗನಯಾನಿಗಳು

Update: 2020-12-05 16:04 GMT
  ಫೋಟೊ ಕೃಪೆ: twitter.com

ಕ್ಯಾಲಿಫೋರ್ನಿಯ (ಅಮೆರಿಕ), ಡಿ. 5: ನ್ಯಾಶನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ)ನ ಗಗನಯಾನಿಗಳು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಯಶಸ್ವಿಯಾಗಿ ಮೂಲಂಗಿ ಬೆಳೆಸಿದ್ದಾರೆ. ನವೆಂಬರ್ 30ರಂದು ಅವರು ಮೂಲಂಗಿ ಕಟಾವು ಮಾಡಿದ್ದಾರೆ.

ಅಡ್ವಾನ್ಸ್‌ಡ್ ಪ್ಲಾಂಟ್ ಹ್ಯಾಬಿಟಾಟ್ (ಎಪಿಎಚ್) ಎಂಬ ಫ್ರಿಜ್ ಗಾತ್ರದ ಮುಚ್ಚಿದ ಆವರಣದಲ್ಲಿ ಮೂಲಂಗಿಯನ್ನು ಬೆಳೆಸಲಾಗಿದೆ.

ಬೆಳೆಸಲಾಗಿರುವ 20 ಗಿಡಗಳನ್ನು ಕಟಾವು ಮಾಡಲಾಗಿದ್ದು ಶೈತ್ಯಾಗಾರದಲ್ಲಿ ಇಡಲಾಗಿದೆ. 2021ರಲ್ಲಿ ಸ್ಪೇಸ್‌ಎಕ್ಸ್‌ನ ವಾಣಿಜ್ಯ ಮರುಪೂರೈಕೆ ಸೇವೆಗಳ ಗಗನನೌಕೆಯಲ್ಲಿ ಅವುಗಳನ್ನು ಭೂಮಿಗೆ ಕಳುಹಿಸಲಾಗುವುದು ಎಂದು ನಾಸಾ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿರುವ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News