ರನ್‌ವೇಗಿಂತ ಮೊದಲೇ ಇಳಿದ ಸ್ಪೈಸ್ ಜೆಟ್ ವಿಮಾನ

Update: 2020-12-05 17:30 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಡಿ. 5: ಸ್ಪೈಸ್‌ ಜೆಟ್ ವಿಮಾನ ಶನಿವಾರ ಗುವಾಹಟಿ ವಿಮಾನ ನಿಲ್ದಾಣದ ರನ್‌ವೇ ಆರಂಭವಾಗುವುದಕ್ಕೆ ಮೊದಲೇ ಇಳಿದಿದೆ. ಆದರೆ, ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಪಾಯ ಉಂಟಾಗಿಲ್ಲ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು-ಗುವಾಹಟಿ ನಡುವೆ ಸಂಚರಿಸುತ್ತಿದ್ದ ವಿಮಾನದ ಇಬ್ಬರು ಪೈಲಟ್‌ಗಳನ್ನು ಡಿಜಿಸಿಎ ಕೆಳಗಿಳಿಸಿದೆ. ರನ್‌ವೇಯಲ್ಲಿನ ನಿಯೋಜಿತ ಗುರಿಗಿಂತ ಮೊದಲೇ ವಿಮಾನ ಕೆಳಗಿಳಿಯಿತು. ಆದರೆ, ಯಾವುದೇ ಪ್ರಯಾಣಿಕರಿಗೆ ಅಪಾಯ ಉಂಟಾಗಿಲ್ಲ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ‘‘ವಿಮಾನ ಮೊದಲೇ ಇಳಿದಿರುವುದರಿಂದ ರನ್‌ವೇಯ ಲೈಟ್‌ಗಳಿಗೆ ಹಾನಿ ಉಂಟಾಗಿದೆ’’ ಎಂದು ಅವರು ಹೇಳಿದ್ದಾರೆ. ಘಟನೆ ಸಂಭವಿಸುವ ಸಂದರ್ಭ ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬುದು ಇದುವರೆಗೆ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News