96 ಲಕ್ಷ ದಾಟಿದ ಕೊರೋನ ಸೋಂಕು
Update: 2020-12-05 23:08 IST
ಹೊಸದಿಲ್ಲಿ, ಡಿ. 5: ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನ ಹೊಸ 36,652 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 96 ಲಕ್ಷ ದಾಟಿದೆ ಎಂದು ಸರಕಾರದ ದತ್ತಾಂಶ ಹೇಳಿದೆ.
ದೇಶದಲ್ಲಿ ಕೊರೋನ ಸೋಂಕಿನ ಒಟ್ಟು 96,08,211 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 512 ಮಂದಿ ಸಾವನ್ನಪ್ಪುವುದರೊಂದಿಗೆ ಕೊರೋನ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 1,39,700ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ 42,533 ಜನರನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಹೊಸ ಸೋಂಕಿಗಿಂತ ಗುಣಮುಖರಾಗುತ್ತಿರುವ ಸಂಖ್ಯೆ ಗಮರ್ನಾರ್ಹ ಹೆಚ್ಚಾಗಿದೆ. ಇದುವರೆಗೆ ಒಟ್ಟು 90.58 ಲಕ್ಷ ಜನರು ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 127, ದಿಲ್ಲಿಯಲ್ಲಿ 73, ಪಶ್ಚಿಮಬಂಗಾಳದಲ್ಲಿ 52, ಉತ್ತರಪ್ರದೇಶ ಹಾಗೂ ಕೇರಳದಲ್ಲಿ ತಲಾ 29 ಹಾಗೂ ಪಂಜಾಬ್‌ನಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಎಂದು ದತ್ತಾಂಶ ಹೇಳಿದೆ.