ಬಿಜೆಪಿ ಸರಕಾರ ಕೃಷಿ ಕಾಯ್ದೆ ಹಿಂಪಡೆಯಲಿ ಅಥವಾ ಅಧಿಕಾರ ತ್ಯಜಿಸಲಿ: ಮಮತಾ ಬ್ಯಾನರ್ಜಿ

Update: 2020-12-07 14:52 GMT

ಹೊಸದಿಲ್ಲಿ, ಡಿ. 6: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೂತನ ಕೃಷಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಅಥವಾ ಅಧಿಕಾರ ತ್ಯಜಿಸಬೇಕು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಸೋಮವಾರ ಎಚ್ಚರಿಸಿದ್ದಾರೆ.

ಪಶ್ಚಿಮ ಮಿಡ್ನಾಪುರದಲ್ಲಿ ರ್ಯಾಲಿ ಸಂದರ್ಭ ಮಾತನಾಡಿದ ಅವರು, ಬಿಜೆಪಿಯ ದುರಾಡಳಿತವನ್ನು ಸಹಿಸಿಕೊಳ್ಳುವುದಕ್ಕಿಂತ, ಮೌನವಾಗಿರುವುದಕ್ಕಿಂತ ಜೈಲಿನಲ್ಲಿ ಇರಲು ಬಯಸುತ್ತೇನೆ ಎಂದರು. ‘‘ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಕೃಷಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವೇ ಅಧಿಕಾರದಿಂದ ಕೆಳಗಿಳಿಯಬೇಕು. ರೈತರ ಹಕ್ಕುಗಳನ್ನು ಬಲಿ ಕೊಟ್ಟು ಅವರು ಅಧಿಕಾರದಲ್ಲಿ ಮುಂದುವರಿಯಬಾರದು’’ ಎಂದು ಅವರು ಹೇಳಿದ್ದಾರೆ. ಬಿಜೆಪಿ ಪಕ್ಷವನ್ನು ‘ಹೊರಗಿನವರು’ ಎಂದು ಕರೆದ ಮಮತಾ ಬ್ಯಾನರ್ಜಿ, ಪಶ್ಚಿಮಬಂಗಾಳದ ಜನರನ್ನು ಹೊರಗಿನವರು ನಿಯಂತ್ರಿಸಲು ರಾಜ್ಯದ ಜನರು ಅವಕಾಶ ನೀಡಲಾರರು. ಇಲ್ಲಿನ ಜನರು ಅದನ್ನು ವಿರೋಧಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News