×
Ad

ವಿಜ್ಞಾನಿಯ ಹತ್ಯೆಯಲ್ಲಿ ಉಪಗ್ರಹ ನಿಯಂತ್ರಿತ ಬಂದೂಕು ಬಳಕೆ: ಇರಾನ್

Update: 2020-12-07 21:24 IST

ಇರಾನ್ (ಟೆಹರಾನ್), ಡಿ. 7: ಕಳೆದ ವಾರ ನಡೆದ ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಯ ಹತ್ಯೆಯಲ್ಲಿ ಉಪಗ್ರಹ ನಿಯಂತ್ರಿತ ಮಶೀನ್ ಗನ್ ಬಳಸಲಾಗಿತ್ತು ಎಂದು ಅರೆ ಅನಧಿಕೃತ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಟೆಹರಾನ್‌ನ ಹೊರವಲಯದಲ್ಲಿ ನವೆಂಬರ್ 27ರಂದು ಗುಂಡು ಹಾರಿಸಿ ಹಾಗೂ ಬಾಂಬ್ ದಾಳಿ ನಡೆಸಿ ವಿಜ್ಞಾನಿಯನ್ನು ಹತ್ಯೆಗೈಯಲಾಗಿತ್ತು. ಪೂರ್ವ ಟೆಹರಾನ್‌ನಲ್ಲಿ ಹೆದ್ದಾರಿಯೊಂದರಲ್ಲಿ ಅವರು ಕಾರು ಚಲಾಯಿಸುತ್ತಿದ್ದಾಗ ಬಂದೂಕೊಂದು ಕೃತಕ ಬುದ್ಧಿಮತ್ತೆಯನ್ನು ಬಳಸಿ ಅವರತ್ತ ಗುರಿಯಿಟ್ಟಿತು ಎಂದು ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್‌ನ ಉಪ ಕಮಾಂಡರ್ ಅಲಿ ಫಡವಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಬಂದೂಕು ಒಟ್ಟು 13 ಗುಂಡುಗಳನ್ನು ಹಾರಿಸಿತು. ಅದು ಎಷ್ಟು ನಿಖರತೆಯಿಂದ ಅವರತ್ತ ಗುರಿಯಿರಿಸಿತು ಎಂದರೆ, ಅದೇ ಕಾರಿನಲ್ಲಿ ಅವರಿಂದ ಕೆಲವೇ ಇಂಚುಗಳಷ್ಟು ದೂರ ಕುಳಿತಿದ್ದ ಅವರ ಪತ್ನಿ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ’’ ಎಂದು ಫಡವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News