×
Ad

“ಪ್ರಶಸ್ತಿ ವಿಜೇತರು ದೇಶಭಕ್ತರಲ್ಲ”: ಬಿಜೆಪಿ ಮುಖಂಡನ ವಿಚಿತ್ರ ಹೇಳಿಕೆ

Update: 2020-12-07 23:04 IST

ಭೋಪಾಲ್,ಡಿ.7: "ಭಾರತ ಮಾತೆಯನ್ನು ಅವಹೇಳಿಸುವ ಮತ್ತು ದೇಶವನ್ನು ಒಡೆಯುತ್ತಿರುವವನ್ನು ರಾಷ್ಟ್ರೀಯ ಪ್ರಶಸ್ತಿಗಳಿಂದ ಗೌರವಿಸಲಾಗುತ್ತಿದೆ" ಎಂದು ಬಿಜೆಪಿ ಮುಖಂಡ, ಮಧ್ಯ ಪ್ರದೇಶದ ಸಚಿವ ರೈತರ ಪ್ರತಿಭಟನೆಗೆ ಬೆಂಬಲವಾಗಿ ಪ್ರಶಸ್ತಿಗಳನ್ನು ಹಿಂದಿರಿಗಿಸುತ್ತೇವೆ ಎಂದ ಪ್ರಶಸ್ತಿ ವಿಜೇತರ ಹೇಳಿಕೆಗೆ ಪ್ರತಿಯಿಕ್ರಿಯಿದ್ದಾರೆ.

“ಪ್ರಶಸ್ತಿ ವಿಜೇತರೆಂದು ಕರೆಯಲ್ಪಡುವವರು ಮತ್ತು ಬುದ್ದಿಜೀವಿಗಳು ದೇಶಭಕ್ತರಲ್ಲ” ಎಂದು ಮಧ್ಯ ಪ್ರದೇಶದ ಕೃಷಿ ಸಚಿವ ಕಮಲ್ ಪಟೇಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 “ಹಿಂದೆ ಕೂಡಾ ಪ್ರಶಸ್ತಿಗಳನ್ನು ಹಿಂದಿರುಗಿಸಲಾಗಿತ್ತು. ಅವರಿಗೆ ಪ್ರಶಸ್ತಿ ಹೇಗೆ ಲಭಿಸುತ್ತದೆ? ಯಾರು ಭಾರತ ಮಾತೆಗೆ ಅವಹೇಳನ ಮಾಡುತ್ತಾರೋ ಮತ್ತು ದೇಶವನ್ನು ವಿಭಜಿಸಲು ಕರೆ ನೀಡುತ್ತಾರೋ ಅವರು ಪ್ರಶಸ್ತಿ ಪಡೆಯುತ್ತಾರೆ" ಎಂದು ಅವರು ಹೇಳಿದರು.

"ಎಲ್ಲಾ ರೈತ ಸಂಘಟನೆಗಳಿಗೆ ನಾನು ಸವಾಲು ಹಾಕುತ್ತಿದ್ದೇನೆ. ನನಗೆ ಪ್ರಶ್ನೆ ಕೇಳಲಿ, ಅವರಿಗೆ ನಾನು ಉತ್ತರ ನೀಡುತ್ತೇನೆ. ಅವರಿಗೆ ಕಾಯ್ದೆ ರದ್ದು ಪಡಿಸಬೇಕು, ಇದು ಹೇಗೆ ಸಾಧ್ಯ? ಭಾರತದ ಜನತೆ ದೊಡ್ಡ ಶಕ್ತಿ ಮತ್ತು ಈ ಮಸೂದೆ ಜನರಿಂದ ಚುನಾಯಿತರಾದ ಸಂಸದರಿಂದ ಅಂಗೀಕರಿಸಲಾಗಿದೆ" ಎಂದೂ ಅವರು ಹೇಳಿದರು

ಪಂಜಾಬ್ ನ ಹಲವು ಕ್ರೀಡಾಪಡುಗಳು, ಕಲಾವಿದರು ಮತ್ತು ಕೆಲವು ರಾಜಕಾರಣಿಗಳೂ ಕೂಡ ರೈತರ ಪ್ರತಿಭಟನೆಗೆ ಬೆಂಬಲವಾಗಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News