×
Ad

ಪ್ರತಿಭಟನಾ ಸ್ಥಳದಿಂದ ದೂರ ಉಳಿಯುವ ಪ್ರಬುದ್ಧ ನಡೆ ಅನುಸರಿಸಿದ ವಿಪಕ್ಷ ನಾಯಕರು: ಸೀತಾರಾಮ ಯೆಚೂರಿ

Update: 2020-12-08 23:43 IST

ಹೊಸದಿಲ್ಲಿ, ಡಿ.8: ಕೃಷಿ ಮಸೂದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ವಿಪಕ್ಷ ನಾಯಕರು, ಪ್ರತಿಭಟನಾ ಸ್ಥಳದಿಂದ ದೂರ ಉಳಿಯುವ ಪ್ರಬುದ್ಧ ನಿರ್ಧಾರ ಕೈಗೊಂಡಿದ್ದಾರೆ ಎಂದು ಎಡಪಕ್ಷಗಳು ಹೇಳಿವೆ.

ಪ್ರತಿಭಟನೆಯ ಸ್ಥಳದಿಂದ ದೂರ ಉಳಿಯುವ ವಿಪಕ್ಷ ನಾಯಕರ ನಿರ್ಧಾರಕ್ಕೆ ರೈತ ಸಂಘಟನೆಗಳೂ ಸಮ್ಮತಿಸಿವೆ. ಪ್ರತಿಭಟನೆಯ ಸ್ಥಳದಲ್ಲಿ ಯಾವುದೇ ಪಕ್ಷದ ಬ್ಯಾನರ್ ಇರುವುದು ಸರಿಯಲ್ಲ ಎಂಬುದು ರೈತ ಮುಖಂಡರ ಅಭಿಪ್ರಾಯವಾಗಿದೆ. ಆದರೂ ನಮ್ಮ ಸಂಸದರು ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಲ್ಲಿದ್ದಾರೆ. ಪಕ್ಷದ ಕಾರ್ಯಕರ್ತರೂ ಇದ್ದಾರೆ. ಆದರೆ ಪಕ್ಷದ ಬ್ಯಾನರ್ ಅಥವಾ ಪೋಸ್ಟರ್ ಹಾಕಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹೇಳಿದ್ದಾರೆ.

ರೈತರ ಪ್ರತಿಭಟನೆ ರಾಜಕೀಯೇತರವಾಗಿದೆ ಮತ್ತು ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಯಾವುದೇ ರಾಜಕೀಯ ಮುಖಂಡರು ಉಪಸ್ಥಿತರಿರಬಾರದು ಎಂದು ನಿರ್ಧರಿಸಲಾಗಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News