ರಾಜಸ್ಥಾನ: ಪಂಚಾಯತ್ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಹಿನ್ನಡೆ, ಬಿಜೆಪಿ ಮೇಲುಗೈ
ಜೈಪುರ, ಡಿ.9: ರಾಜಸ್ತಾನದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿದ್ದು ಬಿಜೆಪಿ ಮೇಲುಗೈ ಸಾಧಿಸಿದೆ.
ರಾಜ್ಯದ 33 ಜಿಲ್ಲಾ ಪರಿಷದ್ (ಜಿಲ್ಲಾ ಪಂಚಾಯತ್)ಗಳಲ್ಲಿ 21 ಜಿಲ್ಲಾ ಪಂಚಾಯತ್‌ಗೆ ಮತ್ತು ಗ್ರಾಮ ಪಂಚಾಯತ್(ಪಂಚಾಯತ್ ಸಮಿತಿ) ಗಳ 222 ಸ್ಥಾನಗಳಲ್ಲಿ 93 ಸ್ಥಾನಗಳಿಗೆ ನವೆಂಬರ್ ಅಂತ್ಯದಲ್ಲಿ ಮತದಾನ ನಡೆದಿತ್ತು. 21 ಜಿಲ್ಲಾ ಪರಿಷದ್‌ಗಳಲ್ಲಿ ಬಿಜೆಪಿ 14 ಮತ್ತು 222 ಪಂಚಾಯತ್ ಸಮಿತಿಗಳಲ್ಲಿ ಬಿಜೆಪಿ 93 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ.
ಬಿಜೆಪಿ ಗೆಲುವಿನ ಬಳಿಕ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ರಾಜಸ್ಥಾನದ ಜನತೆ ಬಿಜೆಪಿಯೊಂದಿಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಹಳ್ಳಿಯ ಜನರು, ಬಡವರು, ಕೃಷಿಕರು, ಮಹಿಳೆಯರು ಮತ್ತು ಕಾರ್ಮಿಕರು ಬಿಜೆಪಿಯ ಮೇಲಿಟ್ಟಿರುವ ವಿಶ್ವಾಸದ ಸಂಕೇತ ಇದಾಗಿದೆ. ಕೃಷಿ ಸುಧಾರಣೆ ವಿಷಯದ ಕುರಿತು ವಿಪಕ್ಷಗಳ ದಾಳಿಯ ಹೊರತಾಗಿಯೂ ಜನತೆ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಕೇಂದ್ರ ಸರಕಾರದ ಸುಧಾರಣಾ ಕ್ರಮಗಳು ಹಾಗೂ ಬಿಜೆಪಿಯ ಬಗ್ಗೆ ಇಡೀ ದೇಶವೇ ಸಂತುಷ್ಟವಾಗಿದ್ದಾರೆ ಎಂಬುದಕ್ಕೆ ಬಿಹಾರ, ತೆಲಂಗಾಣ, ಅರುಣಾಚಲ ಪ್ರದೇಶದ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.