×
Ad

ಔತಣಕೂಟದ ಆಹಾರ ಮುಟ್ಟಿದ ಕಾರಣಕ್ಕೆ ದಲಿತ ಯುವಕನನ್ನು ಥಳಿಸಿ ಹತ್ಯೆ

Update: 2020-12-09 12:56 IST

ಭೋಪಾಲ್ : ಔತಣಕೂಟವೊಂದಕ್ಕಾಗಿ ತಯಾರಿಸಲಾದ ಆಹಾರವನ್ನು ಮುಟ್ಟಿದ್ದಾನೆ ಎಂಬ ಕಾರಣಕ್ಕೆ 25 ವರ್ಷದ ದಲಿತ ಯುವಕನೊಬ್ಬನನ್ನು ಮೇಲ್ಜಾತಿಯ ಇಬ್ಬರು ವ್ಯಕ್ತಿಗಳು ಥಳಿಸಿ ಸಾಯಿಸಿದ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಬುಂದೇಲ್‍ಖಂಡ್ ಜಿಲ್ಲೆಯ ಛತರ್ಪುರ್ ಎಂಬಲ್ಲಿನ ಕಿಶನ್‍ಪುರ್ ಗ್ರಾಮದಿಂದ ವರದಿಯಾಗಿದೆ.

ದೇವರಾಜ್ ಅನುರಾಗಿ ಎಂಬ ದಲಿತ ಯುವಕನನ್ನು ಆರೋಪಿಗಳಾದ ಭೂರಾ ಸೋನಿ ಹಾಗೂ ಸಂತೋಷ್ ಪಾಲ್ ಕೆಲಸಕ್ಕೆಂದು ಕರೆದು  ಔತಣಕೂಟದ ನಂತರ ಸ್ವಚ್ಛಗೊಳಿಸುವ ಕಾರ್ಯವನ್ನು ಆತನಿಗೆ ವಹಿಸಿದ್ದರು. ಆದರೆ ಆತ  ಅಲ್ಲಿದ್ದ ಆಹಾರ ಸೇವಿಸುತ್ತಿರುವುದನ್ನು ಗಮನಿಸಿದ ಇಬ್ಬರೂ ಸಿಟ್ಟಿನಿಂದ ಆತನನ್ನು ಥಳಿಸಿ ಸಾಯಿಸಿದ್ದಾರೆ.

ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅವರಿಬ್ಬರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ಕೂಡ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಭೂರಾ ಸೋನಿಗೆ ಕ್ರಿಮಿನಲ್ ಹಿನ್ನೆಲೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News