ಪ್ರಧಾನಿಯ ವಿಮಾನ ಪ್ರಯಾಣದ ವಿವರ ನೀಡಲು ಸಾಧ್ಯವಿಲ್ಲ: ಹೈಕೋರ್ಟ್ ಗೆ ತಿಳಿಸಿದ ಐಎಎಫ್

Update: 2020-12-09 10:34 GMT

ಹೊಸದಿಲ್ಲಿ: 2013ರ ಎಪ್ರಿಲ್ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿಮಾನ ರಿಟರ್ನ್ಸ್ (ಎಸ್ ಆರ್ ಎಫ್-2)ಕುರಿತು ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ( ಸಿಐಸಿ)ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಭಾರತೀಯ ವಾಯು ಪಡೆ(ಐ ಎಎಫ್)ಬುಧವಾರ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದೆ. ಭದ್ರತೆಯ ಕಾರಣಕ್ಕೆ ಪ್ರಧಾನಮಂತ್ರಿ ವಿಮಾನ ಯಾನದ ಕುರಿತು ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ಐಎಎಫ್ ಪ್ರತಿಪಾದಿಸಿದೆ.

ಕೇಂದ್ರ ಸರಕಾರದ ಹಿರಿಯ ಸಮಿತಿಯ ವಕೀಲ ರಾಹುಲ್ ಶರ್ಮಾ ಹಾಗೂ ವಕೀಲ ಕೆ.ಸಿ.ಭಟ್  ಜುಲೈ 8 ರಂದು ಸಿಸಿಐ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಆರ್ ಟಿ ಐ ಅರ್ಜಿದಾರ ಕಮಾಂಡರ್ (ನಿವೃತ್ತ)ಲೋಕೇಶ್ ಬಾತ್ರಾಗೆ ವಿಶೇಷ ವಿಮಾನ ರಿಟನ್ಸ್-2 ಕುರಿತು ಪ್ರಮಾಣೀಕೃತ ಪ್ರತಿಗಳನ್ನು ಒದಗಿಸುವಂತೆ ಸಿಸಿಐ ಜುಲೈ 8 ರಂದು ಐಎಎಫ್ ಗೆ ಸೂಚಿಸಿತ್ತು. 2013ರ ಎಪ್ರಿಲ್ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ವಿದೇಶಿ ಭೇಟಿಯ ಕುರಿತ ಪ್ರಮಾಣೀಕೃತ ಎಸ್ ಆರ್ ಎಫ್-1 ಹಾಗೂ ಎಸ್ ಆರ್ ಎಫ್-2ನ್ನು ಕೋರಿ ಆರ್ ಟಿಐ ಕಾರ್ಯಕರ್ತ ಬಾತ್ರಾ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News