×
Ad

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕುರಿತು ರೈತರಿಗೆ ಲಿಖಿತ ಭರವಸೆ ನೀಡಿದ ಕೇಂದ್ರ ಸರಕಾರ

Update: 2020-12-09 16:34 IST

ಹೊಸದಿಲ್ಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ)ಉಳಿಸಿಕೊಳ್ಳುವ ಕುರಿತು ಪ್ರತಿಭಟನಾನಿರತ ರೈತರಿಗೆ ಲಿಖಿತ ಭರವಸೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.

ರೈತರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಭೇಟಿಯು ವಿಫಲವಾದ ಮರುದಿನವೇ ಕೇಂದ್ರ ಸರಕಾರ ಕನಿಷ್ಠ ಬೆಂಬಲ ಬೆಲೆ ಬದಲಾಗದು ಎಂಬ ಕುರಿತು ಲಿಖಿತ ಭರವಸೆ ನೀಡಿದೆ. ರೈತರು ಹಾಗೂ ಅಮಿತ್ ಶಾ ನಡುವಿನ ಸಭೆಯಲ್ಲಿ ಎರಡೂ ಕಡೆಯವರು ತಮ್ಮ ನಿಲುವಿಗೆ ಬದ್ದರಾಗಿದ್ದರು.

ದಿಲ್ಲಿ-ಹರ್ಯಾಣ ಗಡಿಯಲ್ಲಿ ಬುಧವಾರ ಸಭೆ ನಡೆಸಿರುವ ರೈತ ಸಂಘಟನೆಗಳು ಕೃಷಿ ಕಾನೂನುಗಳನ್ನು ರದ್ದುಪಡಿಸುವ ತನಕ ತಮ್ಮ ಪಟ್ಟು ಸಡಿಲಿಸುವುದಿಲ್ಲ ಎಂದಿವೆ. ಕೃಷಿ ಕಾನೂನು ರದ್ದತಿ ಹೊರತಾಗಿ ಬೇರೆ ಯಾವುದೇ ಪ್ರಸ್ತಾವವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ರೈತ ಸಂಘಟನೆ ಹೇಳಿದೆ.

ಇಂದು ಕೃಷಿ ಸಚಿವ ನರೇಂದ್ರ ತೋಮರ್ ಅವರೊಂದಿಗೆ ನಡೆಯಬೇಕಾಗಿದ್ದ ಆರನೇ ಸುತ್ತಿನ ಮಾತುಕತೆಯು ರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News