×
Ad

ಪ್ರತಿಭಟನಾ ನಿರತ ರೈತನ ಮೇಲೆ ಪೊಲೀಸ್ ಲಾಠಿ ಬೀಸುತ್ತಿರುವ ಫೋಟೋ ಕ್ಲಿಕ್ಕಿಸಿದ್ದ ಛಾಯಾಗ್ರಾಹಕನ ಮೇಲೆ ಹಲ್ಲೆ: ಆರೋಪ

Update: 2020-12-09 16:41 IST

ಹೊಸದಿಲ್ಲಿ: ತನ್ನ ಹಾಗೂ ತನ್ನ ಭಾವಿ ಪತ್ನಿಯ ಮೇಲೆ ಹಲ್ಲೆ ನಡೆದಿದೆ. ಪೊಲೀಸರು ಎಫ್ ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಪಿಟಿಐ ಛಾಯಾಗ್ರಾಹಕ ಆರೋಪಿಸಿದ್ದಾರೆ ಎಂದು jantakareporter.com ವರದಿ ಮಾಡಿದೆ.

ತನ್ನ ಮೇಲೆ 5-6 ಮಂದಿ ದಾಳಿ ನಡೆಸಿದ್ದಾರೆ ಎಂದು ಛಾಯಾಗ್ರಾಹಕ ರವಿ ಚೌಧರಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಘಟನೆಯು ಉತ್ತರಪ್ರದೇಶದ ಮುರಾದ್ ನಗರದಲ್ಲಿ ನಡೆದಿದೆ ಎನ್ನಲಾಗಿದೆ.

ದಿಲ್ಲಿಯಿಂದ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರು ಚಾಲಕ ಓವರ್ ಟೇಕ್ ಮಾಡಿ ತಡೆದು ನಿಂದಿಸಿದ್ದಾನೆ.  ಇದಕ್ಕೆ ಆಕ್ಷೇಪಿಸಿದಾಗ ಕಾರನ್ನು ಚಾಲಕ ದಾರಿಗೆ ಅಡ್ಡಲಾಗಿ ಇಟ್ಟಿದ್ದಾನೆ. ಕಾರಿನಿಂದ ಹೊರಬಂದ 3-4 ಮಂದಿ ನನಗೆ ಥಳಿಸಲು ಆರಂಭಿಸಿದರು. ಗುಂಪಿನಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಕೆಲವು ದೂರದ ತನಕ ಕಾರಿನಲ್ಲಿ ಅಟ್ಟಿಸಿಕೊಂಡು ಬಂದಿದ್ದಾರೆ ಎಂದು ರವಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಚೌಧರಿಗೆ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾ ನಿರತ ರೈತನಿಗೆ ಲಾಠಿ ಬೀಸುತ್ತಿರುವ ಫೋಟೊದ ಮೂಲಕ ಛಾಯಾಗ್ರಾಹಕ ರವಿ ಜನಪ್ರಿಯತೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News