×
Ad

ಇಟಲಿಯ 1982ರ ಫುಟ್ಬಾಲ್ ವಿಶ್ವಕಪ್ ಹೀರೊ ಪೌಲೊ ರೊಸಿ ನಿಧನ

Update: 2020-12-10 11:31 IST

ರೋಮ್: ಇಟಲಿಯ 1982ರಲ್ಲಿ ವಿಶ್ವಕಪ್ ಗೆಲ್ಲುವ ಅಭಿಯಾನದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿರುವ ಪೌಲೊ  ರೊಸಿ  ಗುರುವಾರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಇಟಲಿಯ ಟಿವಿ ಚಾನೆಲ್ ಆರ್ ಎಐ ಸ್ಪೋಟ್ಸ್  ರೊಸಿ  ಅವರ ಸಾವಿನ ಸುದ್ದಿಯನ್ನು ಪ್ರಕಟಿಸಿತು. ಈ ಚಾನೆಲ್ ನಲ್ಲಿ ರೊಸಿ ಕ್ರೀಡಾ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಜುವೆಂಟಸ್ ತಂಡದಲ್ಲಿ ನಾಲ್ಕು ವರ್ಷ ಆಡಿದ್ದ ರೊಸಿ ಎರಡು ಬಾರಿ ಇಟಾಲಿಯನ್ ಸೀರಿ ಎ ಪ್ರಶಸ್ತಿಗಳು, ಯುರೋಪಿಯನ್ ಕಪ್ ಹಾಗೂ ಕೊಪಾ ಪ್ರಶಸ್ತಿಗಳನ್ನು ಜಯಿಸಿದ್ದರು.

ಇಟಲಿಯ ರಾಷ್ಟ್ರೀಯ ತಂಡದಲ್ಲಿದ್ದಾಗ 1982ರ ವಿಶ್ವಕಪ್ ಟೂರ್ನಿಯಲ್ಲಿ ಆರು ಗೋಲುಗಳನ್ನು ಗಳಿಸಿ ಇಟಲಿ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸುವ ಮೂಲಕ  ಸ್ಮರಣೀಯ ಪ್ರದರ್ಶನ ನೀಡಿದ್ದರು.

ಬ್ರೆಝಿಲ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿ ಇಟಲಿ 3-2 ಅಂತರದಿಂದ ಗೆಲ್ಲಲು ನೆರವಾಗಿದ್ದ ರೊಸಿ ಅವರು ಸೆಮಿ ಫೈನಲ್ ನಲ್ಲಿ ಪೊಲ್ಯಾಂಡ್ ವಿರುದ್ಧ ಎರಡು ಗೋಲು ಗಳಿಸಿ 2-0 ಅಂತರದಿಂದ ಜಯ ಸಾಧಿಸಲು ಕಾರಣರಾಗಿದ್ದರು.

ಸ್ಪೇನ್ ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಇಟಲಿ ತಂಡ ವೆಸ್ಟ್ ಜರ್ಮನಿಯನ್ನು 3-1 ಅಂತರದಿಂದ ಮಣಿಸಿ ಮೂರನೇ ಬಾರಿ ವಿಶ್ವಕಪ್ ಎತ್ತಿಹಿಡಿದಿತ್ತು. ಫೈನಲ್ ನಲ್ಲಿ ರೊಸಿ ಒಂದು ಪ್ರಮುಖ ಗೋಲು ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News