ಎಸ್ಸೆಸ್ಸೆಫ್ ಮಂಜನಾಡಿ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

Update: 2020-12-11 14:33 GMT

ಮಂಜನಾಡಿ : ಎಸ್ಸೆಸ್ಸೆಫ್ ಮಂಜನಾಡಿ ಶಾಖೆಯ ವಾರ್ಷಿಕ ಮಹಾ ಸಭೆಯು ಶಾಖೆಯ ಅಧ್ಯಕ್ಷರಾದ ಇರ್ಶಾದ್ ಮುಸ್ಲಿಯಾರ್  ರವರ ಅಧ್ಯಕ್ಷತೆಯಲ್ಲಿ ಸುನ್ನಿ ಸೆಂಟರ್  ಮಂಜನಾಡಿಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷರಾದ ಮಶ್ಹೂದ್ ಬಾಹಸನಿ ಔಪಚಾರಿಕವಾಗಿ ಉದ್ಘಾಟಿಸಿದರು. ಡಿವಿಶನ್ ಅಧ್ಯಕ್ಷರಾದ ಇಬ್ರಾಹಿಮ್  ಅಹ್ಸನಿ ತರಗತಿ ನಡೆಸಿದರು. ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುನೀರ್ ಕಲ್ಮಿಂಜ ಸೆಲೆಕ್ಷನ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದರು.

ಶಾಖೆಯ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಮಂಜನಾಡಿ 2020ನೇ ಸಾಲಿನ ವರದಿ ಹಾಗೂ ಲೆಕ್ಕಪತ್ರ ವನ್ನು ಮಂಡಿಸಿದರು. 

 ಈ ಸಂದರ್ಭ ಶಾಖೆಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಅಧ್ಯಕ್ಷರಾಗಿ ಅಶ್ರೀಫ್ ಮಂಜನಾಡಿ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಮಂಜನಾಡಿ, ಕೋಶಾಧಿಕಾರಿ ಅಲ್ತಾಫ್ ಮಂಜನಾಡಿ, ಉಪಾಧ್ಯಕ್ಷರುಗಳಾಗಿ ರಿಝ್ವಾನ್ ಮುಸ್ಲಿಯಾರ್, ಹಯಾಝ್ ಮಂಜನಾಡಿ, ಕಾರ್ಯದರ್ಶಿಗಳಾಗಿ ಇಬ್ರಾಹಿಮ್ ಖಲೀಲ್ ಮಂಜನಾಡಿ, ಮುಝಮ್ಮಿಲ್ ಮಂಜನಾಡಿ, ಫೈಝಲ್ ಮಂಜನಾಡಿ, ಶಾನಿದ್ ಮಂಜನಾಡಿ, ಇಮ್ರಾನ್ ಮಂಜನಾಡಿ, ಅನೀಸ್  ಮಂಜನಾಡಿ ಅವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ  ಮಜೀದ್ ಮಂಜನಾಡಿ, ಕುಂಞಿ ಬಾವ ಹಾಜಿ ಕಟ್ಟೆಮಾರ್, ಫಾರೂಕ್ ಸುಣ್ಣಂಗಳ ಹಾಗು ಇತರರು ಉಪಸ್ಥಿತರಿದ್ದರು. 

ಅಲ್ತಾಫ್‌ ಮಂಜನಾಡಿ ಸ್ವಾಗತಿಸಿದರು. ನಾಸಿರ್ ಮಂಜನಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News