ಬೈರೂತ್ ಸ್ಫೋಟ: ಪ್ರಧಾನಿ, ಮಾಜಿ ಸಚಿವರ ವಿರುದ್ಧ ದೊಷಾರೋಪ

Update: 2020-12-11 16:40 GMT

ಬೈರೂತ್ (ಲೆಬನಾನ್), ಡಿ. 11: ಲೆಬನಾನ್‌ನ ನಿರ್ಗಮನ ಪ್ರಧಾನಿ ಹಸನ್ ದಿಯಾಬ್ ಮತ್ತು ಮೂವರು ಮಾಜಿ ಸಚಿವರ ನಿರ್ಲಕ್ಷವೇ ರಾಜಧಾನಿ ಬೈರೂತ್‌ನಲ್ಲಿ ಆಗಸ್ಟ್ 4ರಂದು ನಡೆದ ಭೀಕರ ಸ್ಫೋಟ ಮತ್ತು ಬೆಂಕಿ ಅಪಘಾತಕ್ಕೆ ಕಾರಣ ಎಂದು ಘಟನೆಯ ಬಗ್ಗೆ ತನಿಖೆ ನಡೆಸಿರುವ ನ್ಯಾಯಾಧೀಶ ಫದಿ ಸವಾನ್ ತೀರ್ಮಾನಿಸಿದ್ದಾರೆ.

ಬಂದರಿನಲ್ಲಿ ಸಂಗ್ರಹಿಸಿಡಲಾಗಿರುವ ಅಮೋನಿಯಂ ನೈಟ್ರೇಟ್ ರಸಗೊಬ್ಬರದ ವಿಲೇವಾರಿಯನ್ನು ಮುಂದೂಡುವುದನ್ನು ವಿರೋಧಿಸಿ ಹಲವರು ಪ್ರಧಾನಿ ಮತ್ತು ಸಚಿವರಿಗೆ ಲಿಖಿತ ನೋಟಿಸ್‌ಗಳನ್ನು ನೀಡಿರುವುದು ತನಿಖೆಯಿಂದ ಖಚಿತವಾದ ಬಳಿಕ ಅವರ ವಿರುದ್ಧ ದೋಷಾರೋಪ ಹೊರಿಸುವ ನಿರ್ಧಾರಕ್ಕೆ ನ್ಯಾಯಾಧೀಶರು ಬಂದಿದ್ದಾರೆ.

‘‘ವಿನಾಶಕಾರಿ ಸ್ಫೋಟ ಮತ್ತು ಅದರ ಅಗಾಧ ಹಾನಿಯನ್ನು ತಪ್ಪಿಸಲು ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ’’ ಎಂಬ ಅಭಿಪ್ರಾಯಕ್ಕೆ ವಿಚಾರಣಾ ನ್ಯಾಯಾಧೀಶರು ಬಂದಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News