ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಜ್ಞಾನಕ್ಕಿಂತ ಮನೋಭಾವ ಮುಖ್ಯ: ಪನೀಶ್ರಾವ್

Update: 2020-12-13 15:09 GMT

ಶಿರ್ವ, ಡಿ.13: ಕಾರ್ಪೊರೇಟ್ ಜಗತ್ತಿನಲ್ಲಿ ವಿದ್ಯಾರ್ಥಿಗಳನ್ನು ಅವರ ಕೌಶಲ್ಯ ಮತ್ತು ಜ್ಞಾನಕ್ಕಿಂತ ಹೆಚ್ಚಾಗಿ ಅವರ ಮನೋಭಾವದ ಆಧಾರದ ಮೇಲೆ ಹೆಚ್ಚು ನೇಮಕ ಮಾಡಿಕೊಳ್ಳಲಾಗುತ್ತದೆ. ಕೌಶಲ್ಯ ಮತ್ತು ಜ್ಞಾನವನ್ನು ಗಳಿಸ ಬಹುದು. ಆದರೆ ವರ್ತನೆ ಹುಟ್ಟಿನಿಂದ ಬಂದ ವಿಷಯವಾಗಿದೆ ಎಂದು ಬೆಂಗಳೂರಿನ ಮೈಂಡ್‌ಟ್ರೀಯ ಮಾನವ ಸಂಪನ್ಮೂಲ ಅಧಿಕಾರಿ ಪನೀಶ್ ರಾವ್ ಹೇಳಿದ್ದಾರೆ.

ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆವರಣ ದಲ್ಲಿ ರವಿವಾರ ನಡೆದ ವಿದ್ಯಾಲಯದ 7ನೇ ವರ್ಷದ ಪದವಿ ಪ್ರದಾನ ಸಮಾರಂದಲ್ಲಿ ಅವರು ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ, ಉಡುಪಿ ಸೋದೆ ಮಠದ ಶ್ರೀವಿಶ್ವ ವಲಭತೀರ್ಥ ಸ್ವ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ಸಮಾಜಕ್ಕೆ ಉಪಯುಕ್ತರಾಗಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗಣಕಯಂತ್ರ ವಿಭಾಗದ ವಿದಿಶ ಪಿ.ಶೇಟ್, ಸಿವಿಲ್ ವಿಭಾಗದ ನಾಗಾರ್ಜುನ ಎಸ್.ಜಿ., ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ತೇಜಶ್ರೀ ಹಾಗೂ ಯಂತ್ರಶಿಲ್ಪವಿಭಾಗದ ದೀಪಕ್ ಆಚಾರ್ ಇವರಿಗೆ ಮಂಗಳೂರಿನ ಪ್ರತಿಷ್ಠಿತ ಮೆ.ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್‌ನ ಪ್ರಶಾಂತ್ ಶೇಟ್ ಮತ್ತು ಹೇಮಂತ್ ಶೇಟ್‌ರವರಿಂದ ಪ್ರಾಯೋಜಿತವಾದ ಚಿನ್ನದ ಪದಗಳನ್ನು ಪ್ರದಾನ ಮಾಡಲಾಯಿತು.

ಶ್ರೇಯಸ್ ಪ್ರಭು ಮತ್ತು ರುಷಾಲಿ ನಾಯಕ್ ಇವರಿಗೆ ಉತ್ತಮ ಶೈಕ್ಷಣಿಕ ಸಾಧನೆಗಾಗಿ ಶ್ರೀಮಧ್ವ ವಾದಿರಾಜ ಪ್ರಶಸ್ತಿಯನ್ನು ನೀಡಿ ಅಭಿನಂದಿಸ ಲಾಯಿತು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಶುಭಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಪ್ರಮಾಣ ವಚನವನ್ನು ಬೋಧಿಸಿ ದರು. ಗಣಿತಶಾಸ್ತ್ರ ವಿಬಾಗದ ಮುಖ್ಯಸ್ಥೆ ಡಾ.ಲೊಲಿಟ ಪ್ರಿಯ ಕ್ಯಾಸ್ತಲಿನೊ ವಂದಿಸಿದರು. ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಸ್ನೇಹ ಜೋಸ್ವಿಟ ಡಿಸೋಜ ಮತ್ತು ಗಣಿತಶಾಸ್ತ್ರ ವಿಭಾಗದ ರೆನಿಟ ಶರೋನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News