ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಒಂದು ದಿನ ಉಪವಾಸ ವೃತ ಕೈಗೊಳ್ಳಲು ಕೇಜ್ರಿವಾಲ್ ಕರೆ

Update: 2020-12-14 06:48 GMT

ನೂತನ ಕೃಷಿ ಮಸೂದೆಯ ವಿರುದ್ಧ ಧರಣಿ ನಿರತರಾಗಿರುವ ರೈತರಿಗೆ ಬೆಂಬಲವಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೆಲ್ಲರೂ ಒಂದು ದಿನ ಉಪವಾಸ ವೃತವನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ದೆಹಲಿಯ ಸಿಂಘು ಬಾರ್ಡರ್ ಬಳಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದ ಕುರಿತು ಪ್ರತಿಕ್ರಿಯೆ ನೀಡುತ್ತಾ ಟ್ವಿಟ್ಟರ್ ಮುಖಾಂತರ ಹೇಳಿಕೆ ನೀಡಿದ್ದಾರೆ.

“ಉಪವಾಸ ವೃತವು ಒಂದು ಪವಿತ್ರ ಕ್ರಿಯೆ. ನೀವು ಎಲ್ಲೇ ಇರಿ, ನಮ್ಮ ರೈತ ಸಹೋದರರಿಗಾಗಿ ಒಂದು ದಿನ ಉಪವಾಸ ವೃತವನ್ನು ಕೈಗೊಳ್ಳಿ. ಅವರ ಹೋರಾಟವು ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ. ಕೊನೆಗೆ ರೈತರೇ ಜಯಶಾಲಿಯಾಗುತ್ತಾರೆ ಎಂದು ಅರವಿಂದ ಕೇಜ್ರಿವಾಲ್ ಟ್ವಿಟ್ಟರ್ ನಲ್ಲಿ ಹೇಳಿಕೆ ನೀಡಿದ್ದಾರೆ.

ದೇಶದ ವಿವಿದ ಭಾಗಗಳ ಲಕ್ಷಾಂತರ ಸಂಖ್ಯೆಯಲ್ಲಿರುವ ರೈತರು ಕೇಂದ್ರ ಸರಕಾರದ ನೂತನ ಕೃಷಿಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೆಹಲಿ-ಜೈಪುರ ಸಂಪರ್ಕಿಸುವ ಮುಖ್ಯ ರಸ್ತೆಗೆ ರೈತರು ಶಹಜಾನ್ ಪುರದಲ್ಲಿ ತಡೆಯೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News