×
Ad

ದಿಲ್ಲಿಯಲ್ಲಿ ಉಪವಾಸ ಮುಷ್ಕರ ಆರಂಭಿಸಿದ ರೈತ ನಾಯಕರು

Update: 2020-12-14 13:17 IST

 ಹೊಸದಿಲ್ಲಿ: ಕೇಂದ್ರ ಸರಕಾರದೊಂದಿಗೆ ಮಾತುಕತೆಯಲ್ಲಿ ಭಾಗವಹಿಸಿದ್ದ 33 ರೈತ ನಾಯಕರು ರೈತರ ಪ್ರತಿಭಟನೆಯ ಪ್ರಮುಖ ಸ್ಥಳವಾದ ಹರ್ಯಾಣ-ದಿಲ್ಲಿ ಗಡಿಯಲ್ಲಿರುವ ಸಿಂಘುವಿನಲ್ಲಿ ಸೋಮವಾರ ಉಪವಾಸ ಮುಷ್ಕರ ಆರಂಭಿಸಿದ್ದಾರೆ.

ರೈತರ ಉಪವಾಸ ಮುಷ್ಕರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಸಂಜೆ 5ರ ತನಕ ನಡೆಯಲಿದೆ. ರೈತರು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಯೊಂದಿಗೆ ಉಪವಾಸ ಮುಷ್ಕರ ಆರಂಭಿಸಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ರೈತರ ಮುಷ್ಕರದಲ್ಲಿ ಭಾಗವಹಿಸುವುದಾಗಿ ಹೇಳುವುದರೊಂದಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತ ಸಹೋದರರಿಗೆ ಬೆಂಬಲ ನೀಡಲು ಎಲ್ಲರೂ ಉಪವಾಸ ನಡೆಸಬೇಕೆಂದು ಟ್ವೀಟ್ ಮೂಲಕ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News