×
Ad

ಐಎಸ್‌ಎಲ್: ಮುಂಬೈ-ಜೆಮ್ಶೆಡ್‌ಪುರ ಪಂದ್ಯ ಡ್ರಾ

Update: 2020-12-14 23:16 IST

ಬಂಬೊಲಿಮ್(ಗೋವಾ): ಹಲವು ಅವಕಾಶವನ್ನು ಕೈಚೆಲ್ಲಿದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ಎಫ್‌ಸಿ ಸೋಮವಾರ ಜಿಎಂಸಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ವಿರುದ್ಧ 1-1 ಅಂತರದಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿದೆ

 ನೆರ್ಜುಸ್ ವಾಲ್‌ಸ್ಕಿಸ್ 9ನೇ ನಿಮಿಷದಲ್ಲಿ ಗೋಲು ಗಳಿಸಿ ಜೆಮ್ಶೆಡ್‌ಪುರಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಮುಂಬೈ ಸಿಟಿ ತಂಡ 15ನೇ ನಿಮಿಷದಲ್ಲಿ ತಿರುಗೇಟು ನೀಡಿತು. ಬಾರ್ಥೊಲೊಮಿವ್ ಮುಂಬೈ 1-1 ರಿಂದ ಸಮಬಲ ಸಾಧಿಸಲು ನೆರವಾದರು.

 ಮೊನ್‌ರಾಯ್ ರೆಡ್ ಕಾರ್ಡ್ ಪಡೆದ ಕಾರಣ ಜೆಮ್ಶೆಡ್‌ಪುರ 10 ಆಟಗಾರರೊಂದಿಗೆ ಆಡಿತು. ಮುಂಬೈ ತಂಡ ಹಲವು ಅವಕಾಶಗಳಿಂದ ವಂಚಿತವಾದ ಕಾರಣ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

ಮುಂಬೈ 6 ಪಂದ್ಯಗಳಲ್ಲಿ 13 ಪಾಯಿಂಟ್‌ಗಳನ್ನು ಗಳಿಸಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಜೆಮ್ಶೆಡ್‌ಪುರ ಆರು ಪಂದ್ಯಗಳಿಂದ 7 ಅಂಕ ಗಳಿಸಿ ಆರನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News