×
Ad

ಜೂಜಿನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟ ಪತಿ

Update: 2020-12-14 23:32 IST

ಪಾಟ್ನಾ, ಡಿ. 14: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಜೂಜಿಗೆ ಪಣವಾಗಿ ಇರಿಸಿದ ಹಾಗೂ ಸೋತ ಬಳಿಕ ಆಕೆ ಮೇಲೆ ಜೂಜುಕೋರ ಗೆಳೆಯರು ಸಾಮೂಹಿಕವಾಗಿ ಅತ್ಯಾಚಾರ ಎಸಗಲು ಅವಕಾಶ ನೀಡಿದ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ.

ವ್ಯಕ್ತಿ ತನ್ನ 30 ವರ್ಷದ ಪತ್ನಿಯನ್ನು ಗೆಳೆಯರೊಂದಿಗೆ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ ಹಾಗೂ ಅನಂತರ ಪವಿತ್ರೀಕರಣದ ನೆಪದಲ್ಲಿ ಆ್ಯಸಿಡ್ ಎರಚಿದ್ದಾನೆ.

ಮಹಿಳೆಯ ಪತಿಯನ್ನು ಸೋನು ಹರಿಜನ ಎಂದು ಗುರುತಿಸಲಾಗಿದ್ದು, ಆತನನ್ನು ರವಿವಾರ ಸಂಜೆ ಬಂಧಿಸಲಾಗಿದೆ. ಅಲ್ಲದೆ, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮುಝೈದ್‌ಪುರ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಕುಮಾರ್ ಝಾ ಹೇಳಿದ್ದಾರೆ.

‘‘ಅತಿ ಸೂಕ್ಷ್ಮ ಘಟನೆಯಾಗಿರುವುದರಿಂದ ನಾವು ಕೂಡಲೇ ಎಫ್‌ಐಆರ್ ದಾಖಲಿಸಿದ್ದೇವೆ ಹಾಗೂ ಆರೋಪಿಯನ್ನು ಬಂಧಿಸಿದ್ದೇವೆ. ಮುಂದಿನ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಕೂಡ ಬಂಧಿಸಲಾಗುವುದು’’ ಎಂದು ಝಾ ತಿಳಿಸಿದ್ದಾರೆ.

ತಿಂಗಳ ಹಿಂದೆ ಸೋನು ಹರಿಜನ ಜೂಜಿನಲ್ಲಿ ಸೋತಿದ್ದ. ಮಾತು ಕೊಟ್ಟ ಪ್ರಕಾರ ಪತ್ನಿಯನ್ನು ಒಂದು ತಿಂಗಳ ಕಾಲ ಗೆಳೆಯರಿಗೆ ಹಸ್ತಾಂತರಿಸಿದ್ದ. ಆದರೆ, ಮಹಿಳೆ ಅವರೊಂದಿಗೆ ತೆರಳಲು ನಿರಾಕರಿಸಿದ್ದರು ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘‘ನಾವು ಸಂತ್ರಸ್ತೆಯ ಹೇಳಿಕೆಯನ್ನು ಅಧ್ಯಯನ ನಡೆಸುತ್ತಿದ್ದೇವೆ ಹಾಗೂ ಆರೋಪಿಯನ್ನು ಬಂಧಿಸಿದ್ದೇವೆ. ಸೋನು ಹರಿಜನ ಜೂಜಿನಲ್ಲಿ ಸೋತು ಪತ್ನಿಯನ್ನು ಕಳೆದುಕೊಂಡಿರುವುದನ್ನು ಹಾಗೂ ಜೂಜುಕೋರ ಗೆಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿರುವುದನ್ನು ಒಪ್ಪಿಕೊಂಡಿದ್ದಾನೆ’’ ಎಂದು ಝಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News