ಶುಭ್ ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ಐಪಿಎಲ್ ವೇಳೆಯೇ ಕಲಿಯಬೇಕಿತ್ತು, ಈಗ ಕಾಲ ಮಿಂಚಿದೆ: ಆಸ್ಟ್ರೇಲಿಯಾ ವೇಗಿ

Update: 2020-12-15 14:18 GMT

ಆಡಿಲೇಡ್-ಓವಲ್,ಡಿ.15: ಸದ್ಯ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡರೆ, ಟಿ-ಟ್ವೆಂಟಿ ಸರಣಿಯಲ್ಲಿ ಭಾರತ ತಂಡವು ಜಯಶಾಲಿಯಾಗಿತ್ತು. ಇದೀಗ ಮುಂದೆ ನಡೆಯಲಿರುವ ಟೆಸ್ಟ್ ಪಂದ್ಯಾಟಕ್ಕೆ ಎರಡೂ ತಂಡಗಳು ಸಿದ್ಧವಾಗುತ್ತಿದೆ. ಈ ನಡುವೆ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರ ಶುಭ್ ಮನ್ ಗಿಲ್ ಆರಂಭಿಕ ಬ್ಯಾಟ್ಸ್ ಮನ್ ಆಗಿ ಉತ್ತಮ ಪ್ರದರ್ಶನ ನೀಡಿದ್ದರು. ಅವರ ಬ್ಯಾಟಿಂಗ್ ಶೈಲಿಯನ್ನು ಕ್ರಿಕೆಟ್ ದಂತಕಥೆಗಳಾದ ಸುನೀಲ್ ಗಾವಸ್ಕರ್ ಹಾಗೂ ಅಲನ್ ಬಾರ್ಡರ್ ಕೂಡಾ ಪ್ರಶಂಸಿಸಿದ್ದರು.

ಇದೀಗ ಗಿಲ್ ಬ್ಯಾಟಿಂಗ್ ಶೈಲಿಯ ಕುರಿತು ಮಾತನಾಡಿದ ಆಸ್ಟ್ರೇಲಿಯಾ ವೇಗಿ ಹಾಗೂ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಗಿಲ್ ಸಹ ಆಟಗಾರ ಪ್ಯಾಟ್ ಕಮಿನ್ಸ್, “ನಾನು ಕೆಕೆಆರ್ ತಂಡದಲ್ಲಿ ನೆಟ್ಸ್ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲೇ ಗಿಲ್ ಬ್ಯಾಟಿಂಗ್ ಅನ್ನು ಅಭ್ಯಸಿಸಬೇಕಿತ್ತು. ಆದರೆ ಈಗ ಕಾಲ ಮಿಂಚಿದೆ” ಎಂದು ಹೇಳಿದ್ದಾರೆ.

“ಹೌದು, ಶುಭಿ (ಶುಬ್ ಮನ್ ಗಿಲ್) ಓರ್ವ ಕ್ಲಾಸ್ ಆಟಗಾರ ಅನ್ನುವುದರಲ್ಲಿ ಸಂಶಯವಿಲ್ಲ. ಒಂದು ವೇಳೆ ಟೆಸ್ಟ್ ಪಂದ್ಯಾಟಕ್ಕೆ ಭಾರತೀಯ ತಂಡದಲ್ಲಿ ಅವರು ಆಯ್ಕೆಯಾದರೆ ನಮ್ಮ ನಡುವೆ ಸ್ನೇಹಪೂರ್ವಕ ಪಂದ್ಯ ನಡೆಯಬಹುದು. ನಾನು ಅದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಆಸ್ಟ್ರೇಲಿಯಾದ ವೇಗಿಗಳ ವಿರುದ್ಧ ಉತ್ತಮ ಪ್ರದರ್ಶನ ತೋರುತ್ತಿರುವ ಶುಭ್ ಮನ್ ಸದ್ಯ ಅಂತಿಮ 11ರ ಪಟ್ಟಿಯಲ್ಲಿ ಸ್ಥಾನ ಗಳಿಸುತ್ತಾರೆಯೋ ಎಂದು ಕಾದು ನೋಡಬೇಕಾಗಿದೆ. ಆಸ್ಟ್ರೇಲಿಯಾ ಹಾಗೂ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಾಟವು ಡಿ.17ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ಪ್ರಾರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News