×
Ad

ಕೋವಿಡ್-19: ಭಾರತದಲ್ಲಿ 95ಶೇ. ದಾಟಿದ ಚೇತರಿಕೆಯ ಪ್ರಮಾಣ

Update: 2020-12-15 19:55 IST

ಹೊಸದಿಲ್ಲಿ, ಡಿ.15: ಭಾರತದಲ್ಲಿ ಕೊರೋನ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ 95ಶೇ. ದಾಟಿದ್ದು ಸಕ್ರಿಯ ಪ್ರಕರಣ 3.4 ಲಕ್ಷಕ್ಕೂ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ. ಮಂಗಳವಾರ 22,065 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು ಕಳೆದ ಕೆಲವು ತಿಂಗಳಲ್ಲಿ ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ 94,22,636ಕ್ಕೇರಿದ್ದು , ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿರುವ ರಾಷ್ಟ್ರಗಳಲ್ಲಿ ಇದು ದಾಖಲೆಯಾಗಿದೆ . ಚೇತರಿಸಿಕೊಂಡವರ ಸಂಖ್ಯೆ ಪ್ರತೀ ದಿನ ಹೆಚ್ಚುತ್ತಿರುವುದು ಮತ್ತು ಮರಣದ ಪ್ರಮಾಣದಲ್ಲಿ ನಿರಂತರ ಇಳಿಕೆಯಾಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ದೇಶದಲ್ಲಿ ಕೊರೋನ ಸಕ್ರಿಯ ಪ್ರಕರಣಗಳ ಸಂಖ್ಯೆ 3,39,820 ಆಗಿದೆ. ಮಂಗಳವಾರದ ಬೆಳಿಗ್ಗಿನವರೆಗಿನ 24 ಗಂಟೆಗಳಲ್ಲಿ 34,477 ಸೋಂಕಿತರು ಚೇತರಿಸಿಕೊಂಡಿದ್ದು ಮಹಾರಾಷ್ಟ್ರದಲ್ಲಿ ಅತ್ಯಧಿಕ (4,610), ಕೇರಳದಲ್ಲಿ 4,481 ಮತ್ತು ಪಶ್ಚಿಮ ಬಂಗಾಳದಲ್ಲಿ 2,980 ರೋಗಿಗಳು ಚೇತರಿಸಿಕೊಂಡಿದ್ದಾರೆ. ಹೊಸ ಸೋಂಕು ಪ್ರಕರಣಗಳಲ್ಲಿ 73.52ಶೇ. ದಷ್ಟು 10 ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ವರದಿಯಾಗಿದೆ. ಮಹಾರಾಷ್ಟ್ರ (2,949), ಕೇರಳ (2,707) ಮೊದಲ ಎರಡು ಸ್ಥಾನದಲ್ಲಿವೆ. ಮಂಗಳವಾರದ ಬೆಳಿಗ್ಗಿನವರೆಗಿನ 24 ಗಂಟೆಯ ಅವಧಿಯಲ್ಲಿ 354 ಮಂದಿ ಮೃತಪಟ್ಟಿದ್ದು ಇದರಲ್ಲಿ ಮಹಾರಾಷ್ಟ್ರ ಮತ್ತು ದಿಲ್ಲಿ ತಲಾ 60 ಪ್ರಕರಣದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಪಶ್ಚಿಮ ಬಂಗಾಳ 43 ಪ್ರಕರಣದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಒಟ್ಟು ಪ್ರಕರಣಗಳ ಸಂಖ್ಯೆ 99,06,165ಕ್ಕೇರಿದ್ದರೆ ಮರಣ ಹೊಂದಿದವರ ಸಂಖ್ಯೆ 1,43,709ಕ್ಕೇರಿದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News