ಅಮೆರಿಕದಲ್ಲಿ ನರೇಂದ್ರ ಮೋದಿ ವಿರುದ್ಧದ ಮೊಕದ್ದಮೆ ವಜಾ

Update: 2020-12-15 15:23 GMT

ವಾಶಿಂಗ್ಟನ್, ಡಿ. 15: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹೂಡಲಾಗಿರುವ 100 ಮಿಲಿಯ ಡಾಲರ್ (ಸುಮಾರು 735 ಕೋಟಿ ರೂಪಾಯಿ) ಪರಿಹಾರ ಕೋರುವ ಮೊಕದ್ದಮೆಯನ್ನು ಅಮೆರಿಕದ ನ್ಯಾಯಾಲಯವೊಂದು ರದ್ದುಪಡಿಸಿದೆ.

ದೂರುದಾರರು ಎರಡು ವಿಚಾರಣೆಗಳಿಗೆ ಹಾಜರಾಗಲು ವಿಫಲರಾದ ಬಳಿಕ ನ್ಯಾಯಾಲಯ ಈ ಕ್ರಮ ತೆಗೆದುಕೊಂಡಿದೆ.

ಅಮೆರಿಕದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದ ಕೆಲವು ದಿನಗಳ ಮೊದಲು, 2019 ಸೆಪ್ಟಂಬರ್ 19ರಂದು ಮೊಕದ್ದಮೆ ಹೂಡಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಭಾರತೀಯ ಸಂಸತ್ತಿನ ನಿರ್ಧಾರವನ್ನು ಪ್ರಶ್ನಿಸಿ ಮೊಕದ್ದಮೆ ಹೂಡಲಾಗಿತ್ತು. ದೂರುದಾರರು ಮೋದಿ, ಶಾ ಮತ್ತು ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ದಿಲ್ಲೋನ್‌ರಿಂದ 100 ಮಿಲಿಯ ಡಾಲರ್ ಪರಿಹಾರ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News