ಮುಂಬೈ ಮೆಟ್ರೊ ಕಾರ್ ಶೆಡ್ ಯೋಜನೆ ನಿರ್ಮಾಣಕ್ಕೆ ಹೈಕೋರ್ಟ್ ತಡೆ
Update: 2020-12-16 12:37 IST
ಮುಂಬೈ: ಮುಂಬೈ ಮಹಾನಗರದ ಹೊಸ ಸ್ಥಳದಲ್ಲಿ ಮೆಟ್ರೋ ಕಾರ್ ಶೆಡ್ ಯೋಜನೆಯ ನಿರ್ಮಾಣ ಕಾರ್ಯಕ್ಕೆ ಬಾಂಬೆ ಹೈಕೋರ್ಟ್ ಇಂದು ತಡೆ ನೀಡಿದೆ. ನ್ಯಾಯಾಲಯದ ಈ ಆದೇಶವು ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರಕಾರಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮೆಟ್ರೋ ರೈಲ್ ಯೋಜನೆಗೆ ವಿವಾದಾತ್ಮಕ ಕಾರ್ ಶೆಡ್ ನಿರ್ಮಾಣದ ಪ್ರದೇಶವನ್ನು ಕಾಂಜೂರ್ ಮಾರ್ಗಕ್ಕೆ ಸ್ಥಳಾಂತರಿಸಲಾಗುವುದು. ಕಾರ್ ಶೆಡ್ ನಿರ್ಮಿಸಲು ಉದ್ದೇಶಿಸಿರುವ ಆರೆ ಕಾಲನಿಯಲ್ಲಿರುವ ಸುಮಾರು 800 ಎಕರೆ ಭೂಮಿ ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ ಎಂದು ಅಕ್ಟೋಬರ್ ನಲ್ಲಿ ಮುಖ್ಯಮಂತ್ರಿ ಠಾಕ್ರೆ ಹೇಳಿಕೆ ನೀಡಿದ್ದರು.
ಇಂದು ನೀಡಿದ ತೀರ್ಪೀನಲ್ಲಿ ಹೈಕೋರ್ಟ್ ಹೊಸ ಸ್ಥಳದಲ್ಲಿ ಮೆಟ್ರೊ ಕಾರ್ ಶೆಡ್ ನಿರ್ಮಿಸುವುದಕ್ಕೆ ತಡೆ ನೀಡಿದೆ. ತನ್ನ ಆದೇಶಕ್ಕೆ ಇನ್ನಷ್ಟು ಸಮಯ ಕಾಯುವಂತೆ ರಾಜ್ಯ ಸರಕಾರಕ್ಕೆ ತಿಳಿಸಿದೆ.