“ವಿವಾಹ ಭರವಸೆ ನೀಡಿ ನಡೆಯುವ ದೈಹಿಕ ಸಂಪರ್ಕವನ್ನು ಎಲ್ಲಾ ಸಂದರ್ಭಗಳಲ್ಲಿಯೂ ಅತ್ಯಾಚಾರ ಎನ್ನಲಾಗುವುದಿಲ್ಲ”

Update: 2020-12-17 10:54 GMT

ಹೊಸದಿಲ್ಲಿ,ಡಿ.17: ವಿವಾಹದ ಭರವಸೆ ನೀಡಿ  ನಡೆಯುವ ದೈಹಿಕ ಸಂಪರ್ಕವು ಮಹಿಳೆಯ ಸಮ್ಮತಿಯೊಂದಿಗೆ ದೀರ್ಘಕಾಲ ಮುಂದುವರಿದಿದ್ದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.

ವ್ಯಕ್ತಿಯೊಬ್ಬನೊಂದಿಗೆ ಹಲವು ತಿಂಗಳ ಕಾಲ ದೈಹಿಕ ಸಂಬಂಧ ಹೊಂದಿದ್ದ ಮಹಿಳೆಯು ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ವಜಾಗೊಳಿಸಿದ ನ್ಯಾಯಾಲಯ “ವಿವಾಹದ ಭರವಸೆ ನೀಡಲಾಗಿದೆ ಎಂಬ ಒಂದೇ ಕಾರಣವು ಒಬ್ಬ ವ್ಯಕ್ತಿಯೊಂದಿಗೆ ದೀರ್ಘಕಾಲ ದೈಹಿಕ ಸಂಬಂಧ ಹೊಂದುವುದಕ್ಕೆ ಪ್ರೇರೇಪಣೆಯಾಗದು” ಎಂದು ಹೇಳಿದೆ.

“ಮಹಿಳೆಯ ಲೈಂಗಿಕ ಶೋಷಣೆಯ ದೃಷ್ಟಿಯಿಂದಲೇ ವಿವಾಹದ ಸುಳ್ಳು ಭರವಸೆ ನೀಡಿದ ಪ್ರಕರಣಗಳನ್ನು ಮಾತ್ರ ಐಪಿಸಿಯ ಸೆಕ್ಷನ್ 375 ಅನ್ವಯ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯ” ಎಂದು ತೀರ್ಪು ನೀಡುವ ವೇಳೆ ಜಸ್ಟಿಸ್ ವಿಭು ಭಕ್ರು ಹೇಳಿದರು.

ಆದರೆ ದೀರ್ಘಕಾಲ ದೈಹಿಕ ಸಂಬಂಧ ಮುಂದುವರಿದಾಗ ಅದನ್ನು ಕೇವಲ ವಿವಾಹದ ಭರವಸೆ ನೀಡಿದ ಒಂದೇ ಕಾರಣಕ್ಕೆ ನಡೆದ  ಕೃತ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ  ನ್ಯಾಯಾಲಯ, ಅತ್ಯಾಚಾರ ಆರೋಪದಿಂದ  ವ್ಯಕ್ತಿಯನ್ನು ಮುಕ್ತಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News