ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್ ಗೆ ಕೊರೋನ ಪಾಸಿಟಿವ್
ಪ್ಯಾರಿಸ್,ಡಿ.17: ಫ್ರಾನ್ಸ್ ರಾಷ್ಟ್ರದ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಮುಂದಿನ ಒಂದು ವಾರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಪ್ರತ್ಯೇಕವಾಗಿರಲಿದ್ದಾರೆ ಎಂದು ಪ್ರಾನ್ಸ್ ಸಚಿವಾಲಯ ಮಾಹಿತಿ ನೀಡಿದ್ದಾಗಿ www.newindianexpress.com ವರದಿ ಮಾಡಿದೆ.
“ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಕೊರೋನ ಸೋಂಕಿಗೆ ತುತ್ತಾಗಿದ್ದಾರೆ. ಪ್ರಾರಂಭಿಕ ಹಂತದ ಲಕ್ಷಣಗಳು ಕಾಣಲಾರಂಭಿಸಿದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಪಾಸಿಟಿವ್ ಫಲಿತಾಂಶ ಬಂದಿದೆ. ಸದ್ಯ ಅವರು ಸ್ವಯಂ ಪ್ರತ್ಯೇಕಿತರಾಗಿದ್ದು, ಎಲ್ಲ ಕೆಲಸ ಕಾರ್ಯಗಳನ್ನು ತಾವಿರುವಲ್ಲಿಂದಲೇ ಮಾಡಲಿದ್ದಾರೆ” ಎಂದು ಸಚಿವಾಲಯ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಒಂದು ರಾಷ್ಟ್ರದ ನಾಯಕರಾಗಿ ಅಧಿಕಾರದಲ್ಲಿರುವಾಗಲೇ ಕೊರೋನ ಸೋಂಕಿಗೆ ತುತ್ತಾದವರಲ್ಲಿ, ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಸ್ ಸಾಲಿಗೆ ಮ್ಯಾಕ್ರೋನ್ ಸೇರ್ಪಡೆಯಾಗಿದ್ದಾರೆ. ಫ್ರಾನ್ಸ್ ದೇಶದಲ್ಲಿ ಇದುವರೆಗೆ ಕೊರೋನ ಸೋಂಕಿಗೆ ಒಟ್ಟು 59,300 ಮಂದಿ ಬಲಿಯಾಗಿದ್ದು, ರಾತ್ರಿ 8 ಗಂಟೆಯ ಬಳಿಕದ ನೈಟ್ ಕರ್ಫ್ಯೂ ಈಗಲೂ ಜಾರಿಯಲ್ಲಿದೆ ಎಂದು ತಿಳಿದು ಬಂದಿದೆ.