ವಲಸಿಗರ ದೋಣಿ ಮುಳುಗಡೆ; 4 ಮಕ್ಕಳ ಮೃತದೇಹ ಪತ್ತೆ

Update: 2020-12-17 15:00 GMT

ಝವಿಯ (ಲಿಬಿಯ), ಡಿ. 17: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ ಬಳಿಕ, ಲಿಬಿಯ ರಾಜಧಾನಿ ಟ್ರಿಪೋಲಿಯ ಪಶ್ಚಿಮದ ಕರಾವಳಿಯಲ್ಲಿ ಬುಧವಾರ ನಾಲ್ಕು ಮಕ್ಕಳ ಮೃತದೇಹಗಳು ದಡ ಸೇರಿವೆ ಎಂದು ಲಿಬಿಯ ರೆಡ್‌ಕ್ರೆಸೆಂಟ್ ಹೇಳಿದೆ. ಈ ಮಕ್ಕಳು 5 ಮತ್ತು 10 ವರ್ಷಗಳ ನಡುವಿನ ವಯಸ್ಸಿನವರು. 

‘‘30 ಮಂದಿಯನ್ನು ಹೊತ್ತ ದೋಣಿಯೊಂದು ಸಮುದ್ರದ ಮಧ್ಯ ಭಾಗದಲ್ಲಿ ಮುಳುಗುತ್ತಿರುವ ಬಗ್ಗೆ ನಮಗೆ ಬುಧವಾರ ಮಾಹಿತಿ ನೀಡಲಾಗಿದೆ’’ ಎಂದು ರೆಡ್ ಕ್ರೆಸೆಂಟ್‌ನ ಹಸನ್ ಮುಖ್ತಾರ್ ಅಲ್-ಬೇ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ರಕ್ಷಣಾ ಸಿಬ್ಬಂದಿ ಮೂವರು ಮಕ್ಕಳ ಮೃತದೇಹಗಳನ್ನು ಝವಿಯ ಸಮೀಪದ ಸಮುದ್ರ ತೀರದಲ್ಲಿ ಪತ್ತೆಹಚ್ಚಿದ್ದಾರೆ ಹಾಗೂ ನಾಲ್ಕನೇ ಮೃತದೇಹವನ್ನು ಅದಕ್ಕಿಂತ ಕೆಲವು ಕಿಲೋಮೀಟರ್ ದೂರದಲ್ಲಿ ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದರು.

ಇತರ ಪ್ರಯಾಣಿಕರ ಪರಿಸ್ಥಿತಿ, ಅವರ ರಾಷ್ಟ್ರೀಯತೆ ಮತ್ತು ಅವರು ಎಲ್ಲಿ ದೋಣಿ ಹತ್ತಿದರು ಎನ್ನುವ ಮಾಹಿತಿ ಲಭಿಸಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News