×
Ad

ಐಎಸ್ಎಲ್: ಒಡಿಶಾ ವಿರುದ್ಧ ಬೆಂಗಳೂರು ಎಫ್ ಸಿಗೆ ಗೆಲುವು

Update: 2020-12-17 21:49 IST

ಬಂಬೊಲಿಮ್: ಬೆಂಗಳೂರು ಎಫ್ ಸಿ ಇಲ್ಲಿನ ಜಿಎಂಸಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್) ಪಂದ್ಯದಲ್ಲಿ ಒಡಿಶಾ ಎಫ್ ಸಿ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿತು.

ಬೆಂಗಳೂರು ಎಫ್ ಸಿ ಪರವಾಗಿ ಸುನೀಲ್ ಚೆಟ್ರಿ 38ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 71ನೇ ನಿಮಿಷದಲ್ಲಿ ಗೋಲು ಬಾರಿಸಿದ ನಾಯಕ ಸ್ಟೀವನ್ ಟೇಲರ್ ಒಡಿಶಾ 1-1ರಿಂದ ಸಮಬಲ ಸಾಧಿಸಲು ನೆರವಾದರು. 79ನೇ ನಿಮಿಷದಲ್ಲಿ ಅಮೂಲ್ಯ ಗೋಲು ಗಳಿಸಿದ ಕ್ಲೆಂಟನ್ ಸಿಲ್ವಾ ಬೆಂಗಳೂರು ತಂಡಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಕೊನೆಯ ತನಕ ಮುನ್ನಡೆ ಉಳಿಸಿಕೊಂಡ ಬೆಂಗಳೂರು 2-1 ಅಂತರದಿಂದ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಐದನೇ ಬಾರಿ ಸೋಲುಂಡಿರುವ ಒಡಿಶಾ 10ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News