ಕೋವಿಡ್ ಲಸಿಕೆ ಪಡೆದ ಬಳಿಕ ನೀವು ಮೊಸಳೆಯಂತೆ ರೂಪಾಂತರಗೊಂಡರೆ ನಾವು ಜವಾಬ್ದಾರರಲ್ಲ: ಬ್ರೆಝಿಲ್ ಪ್ರಧಾನಿ
ಬ್ರಸಿಲಿಯಾ.ಡಿ.19: ಫೈಝರ್-ಬಯೋಎನ್’ಟೆಕ್ ಕೋವಿಡ್ ಲಸಿಕೆ ಹಾಗೂ ಇನ್ನಿತರ ಲಸಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬ್ರೆಝಿಲ್ ಪ್ರಧಾನಿ ಜೇರ್ ಬೊಲ್ಸೆನರೋ, “ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡ ಬಳಿಕ ನೀವೇನಾದರೂ ಮೊಸಳೆಯಂತೆ ರೂಪಾಂತರಗೊಂಡರೆ ಅಥವಾ ಮಹಿಳೆಯರಿಗೆ ಗಡ್ಡ ಬೆಳೆಯಲು ಪ್ರಾರಂಭವಾದರೆ ಅದು ನಿಮ್ಮ ತೊಂದರೆಯೇ ಹೊರತು ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.
ಕೊರೋನ ವೈರಸ್ ನ ಪ್ರಾರಂಭ ಕಾಲದಲ್ಲೇ ಬ್ರೆಝಿಲ್ ಪ್ರಧಾನಿಯು ಈ ಕುರಿತು ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದು, “ಅದೊಂದು ಸಣ್ಣ ಜ್ವರವಷ್ಟೇ” ಎಂದು ಹೇಳಿದ್ದರು. “ನಾನು ಯಾವುದೇ ಕಾರಣಕ್ಕೂ ಲಸಿಕೆ ಹಾಕಿಸಿಕೊಳ್ಳುವುದಿಲ್ಲ” ಎಂಧು ಸಾರ್ವಜನಿಕ ಲಸಿಕಾ ವಿತರಣೆ ಕಾರ್ಯಕ್ರಮದಲ್ಲೇ ಅವರು ಹೇಳಿಕೆ ನೀಡಿದ್ದರು.
“ಫೈಝರ್ ಲಸಿಕೆಯನ್ನು ಪಡೆದುಕೊಂಡ ಬಳಿಕ ಏನಾದರೂ ತೊಂದರೆಗಳು ಉಂಟಾದರೆ ಅದಕ್ಕೆ ನೀವೇ ಕಾರಣ. ನೀವೊಂದು ವೇಳೆ ಮೊಸಳೆಯಂತಾದರೆ ಅದು ನಿಮ್ಮ ತೊಂದರೆಯಷ್ಟೇ. ಒಂದು ವೇಳೆ ನೀವು ಸೂಪರ್ ಹ್ಯೂಮನ್ ಆಗಬಹುದು, ಮಹಿಳೆಯರಿಗೆ ಗಡ್ಡ ಬೆಳೆಯಬಹುದು ಅಥವಾ ನಿಮ್ಮ ಶಬ್ಧವೇ ಸಂಪೂರ್ಣ ದುರ್ಬಲವಾಗಬಹುದು. ಇದಕ್ಕೆಲ್ಲಾ ನೀವೇ ಜವಾಬ್ದಾರರೇ ಹೊರತು ಲಸಿಕೆ ತಯಾರಿಸಿದವರಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಬ್ರೆಝಿಲ್ ನ 212 ಮಿಲಿಯನ್ ಜನಸಂಖ್ಯೆಲ್ಲಿ ಒಟ್ಟು 7.1 ಮಿಲಿಯನ್ ಜನರು ಸೋಂಕುಪೀಡಿತರಾಗಿದ್ದು, 1,85,000 ಮಂದಿ ಮೃತಪಟ್ಟಿದ್ದಾರೆ.