ಪಿಎಚ್‌ಡಿ ವಿದ್ಯಾರ್ಥಿಗಳಿಗಾಗಿ ಸೋಮವಾರ ಜೆಎನ್‌ಯು ಪುನರಾರಂಭ

Update: 2020-12-19 17:52 GMT

ಹೊಸದಿಲ್ಲಿ,ಡಿ.19: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದ ಏಳು ತಿಂಗಳಿಗೂ ಅಧಿಕ ಕಾಲ ಮುಚ್ಚಲ್ಪಟ್ಟಿದ್ದ ಇಲ್ಲಿಯ ಜವಾಹರಲಾಲ ನೆಹರು ವಿವಿ (ಜೆಎನ್‌ಯು)ಯು ನ.12ರಿಂದ ಹಂತಹಂತವಾಗಿ ಪುನರಾರಂಭಗೊಳ್ಳುತ್ತಿದ್ದು,ನಾಲ್ಕನೇ ಹಂತದಲ್ಲಿ ಸೋಮವಾರ,ಡಿ.21ರಿಂದ ಪಿಎಚ್‌ಡಿ ವಿದ್ಯಾರ್ಥಿಗಳಿ ಗಾಗಿ ತೆರೆದುಕೊಳ್ಳಲಿದೆ.

 ಎಲ್ಲ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯಸೇತು ಆ್ಯಪ್ ಹೊಂದಿರುವುದು ಮತ್ತು ತಮ್ಮ ಆರೋಗ್ಯದ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದು ಜೆಎನ್‌ಯು ಕುಲಸಚಿವ ಪ್ರಮೋದ ಕುಮಾರ ಅವರು ತಿಳಿಸಿದ್ದಾರೆ.

ಸಭೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದು,ಕಚೇರಿ ಅವಧಿಯಲ್ಲಿ ಬಾಗಿಲುಗಳು ಮತ್ತು ಕಿಟಕಿಗಳನ್ನು ತೆರೆದಿರಿಸುವುದು,ಏರ್ ಕಂಡಿಷನರ್‌ಗಳನ್ನು ಬಳಸದಿರುವುದು,ಸಾಮಾಜಿಕ ಸಮಾವೇಶಗಳನ್ನು ನಡೆಸದಿರುವುದು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಇವು ವಿವಿಯು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸೇರಿವೆ. ಕೋವಿಡ್-19ರ ಹಿನ್ನೆಲೆಯಲ್ಲಿ ಸೆಂಟ್ರಲ್ ಲೈಬ್ರರಿ,ಎಲ್ಲ ಕ್ಯಾಂಟೀನ್‌ಗಳು ಮತ್ತು ಧಾಬಾಗಳು ಮುಚ್ಚಿರಲಿವೆ ಎಂದೂ ವಿವಿಯು ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News